fbpx

ಏರ್ಪೋರ್ಟ್‌ನಲ್ಲಿ ಬ್ಯಾಗ್ ಪರೀಕ್ಷಿಸಿದ ಕಸ್ಟಮ್ ಅಧಿಕಾರಿಗಳಿಗೆ ಅದರೊಳಗೆ ಸಿಕ್ಕಿದ್ದೇನು ನೋಡಿ! ವೈರಲ್ ವಿಡಿಯೋ

ಟ್ರಾವೆಲ್ ಬ್ಯಾಗ್‌ನಲ್ಲಿ ಐದು ತಿಂಗಳ ಪುಟ್ಟ ಮಗುವನ್ನು ಕಳ್ಳ ಸಾಗಾಣಿಕೆ ಮಾಡುವ ಸಂದರ್ಭ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಈ ಘಟನೆಯ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಕರಾಚಿಯಿಂದ ದುಬೈಗೆ ಈ ಮಗುವನ್ನು ಕಳ್ಳ ಸಾಗಣೆ ಮಾಡಲಾಗುತ್ತಿತ್ತು. ದುಬೈ ಏರ್‌ಪೋರ್ಟ್‌ನಲ್ಲಿ ಬ್ಯಾಗ್ ಬಗ್ಗೆ ಸಂಶಯಗೊಂಡ ಕಸ್ಟಮ್ ಅಧಿಕಾರಿಗಳು ಬ್ಯಾಗ್ ತೆರೆದು ನೋಡಿದಾಗ ಮಗು ಪತ್ತೆಯಾಗಿತ್ತು.


Continue Reading

ಕೂಡಲೇ ಅಧಿಕಾರಿಗಳು ಮಗುವನ್ನು ಬ್ಯಾಗ್‌ನಿಂದ ಹೊರತೆಗೆದು ರಕ್ಷಿಸಿದ್ದಾರೆ. 5 ತಿಂಗಳ ಮಗುವನ್ನು ಅಪಹರಿಸಿ ಕರಾಚಿಯಿಂದ ದುಬೈಗೆ ಕೊಂಡೊಯ್ಯಲಾಗುತ್ತಿತ್ತು. ಪಾಕಿಸ್ತಾನದಲ್ಲಿ ಹೇಗೋ ಬ್ಯಾಗ್ ಅನ್ನು ವಿಮಾನದೊಳಕ್ಕೆ ಸಾಗಿಸಿದ ಕಳ್ಳಸಾಗಾಣೆದಾರರು, ದುಬೈ ಏರ್ಪೋರ್ಟ್‌ನಲ್ಲಿ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದರು.

ಇದನ್ನೂ ಓದಿ:  ಸಾಕು ಬೆಕ್ಕಿಗೆ ಅದ್ದೂರಿ ಸೀಮಂತ ಕಾರ್ಯ ನೆರವೇರಿಸಿದ ಕುಟುಂಬ, ವೈರಲ್ ವಿಡಿಯೋ ನೋಡಿ

ವೈರಲ್ ಆಗುತ್ತಿರುವ ದೃಶ್ಯಗಳಲ್ಲಿ, ಮಗುವನ್ನು ಮಧ್ಯಮ ಗಾತ್ರದ ಕಂದು ಬಣ್ಣದ ಟ್ರಾವೆಲ್ ಬ್ಯಾಗ್‌ ನಲ್ಲಿ ಪ್ಯಾಕ್ ಮಾಡಲಾಗಿತ್ತು ಮತ್ತು ಚೀಲದ ಜಿಪ್ ಸ್ವಲ್ಪ ತೆರೆದಿತ್ತು, ಬಹುಶಃ ಮಗುವಿಗೆ ಆಮ್ಲಜನಕ ಒದಗಿಸಲು ಅಪಹರಣಕಾರರು ಈ ಮಾರ್ಗವನ್ನು ರಚಿಸಿದ್ದರು. ವೈರಲ್ ವಿಡಿಯೋ ನೋಡಿ,

Watch Video

Trending Short Videos


close

This will close in 26 seconds

error: Content is protected !!