fbpx

ಬಾಯಾರಿದ ಈ ಕಾಗೆ ನಳ್ಳಿಯ ಮೇಲೆ ಕುಳಿತು ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಬಾಯಾರಿದ ಕಾಗೆಯ ಕಥೆಯನ್ನು ನೀವು ಕೇಳಿರಬೇಕು, ಅದರಲ್ಲಿ ಕಾಗೆ ಪಾತ್ರೆಯಲ್ಲಿ ಬೆಣಚುಕಲ್ಲು ಹಾಕಿ ಅದರ ಬಾಯಾರಿಕೆಯನ್ನು ನೀಗಿಸುತ್ತದೆ. ಆದರೆ ಈಗ ಅದಕ್ಕೆ ತದ್ವಿರುದ್ಧವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಯಾರಿದ ಕಾಗೆಯೊಂದು ಟ್ಯಾಪ್ ತಿರುಗಿಸಿ ನಂತರ ನೀರು ಕುಡಿಯುತ್ತಿರುವ ವಿಡಿಯೋ ಇದಾಗಿದೆ. ಸಮಯವು ಬದಲಾಗಲಿದೆ ಎಂದು ನಾವು ಆಗಾಗ್ಗೆ ಕೇಳುತ್ತೇವೆ ಮತ್ತು ಹೇಳುತ್ತಿರುತ್ತೇವೆ, ಈ ಬುದ್ಧಿವಂತ ಕಾಗೆ ಇದಕ್ಕೆ ಸಾಕ್ಷಿಯಾಗಿದೆ.

ವೀಡಿಯೊದಲ್ಲಿ, ಬಾಯಾರಿದ ಕಾಗೆ ಮೊದಲು ಟ್ಯಾಪ್ ಮೇಲೆ ಕುಳಿತುಕೊಳ್ಳುತ್ತದೆ ಮತ್ತು ನಂತರ ಅದರ ಕೊಕ್ಕಿನಿಂದ ಟ್ಯಾಪ್ ಅನ್ನು ತಿರುಗಿಸಲು ಪ್ರಯತ್ನಿಸುತ್ತದೆ. ನಳ್ಳಿಯಿಂದ ನೀರು ಹೊರಬರುತ್ತಿದ್ದಂತೆ ಕೊಕ್ಕಿನಿಂದ ನೀರು ಕುಡಿದು ಅದರ ಬಾಯಾರಿಕೆಯನ್ನು ನೀಗಿಸಿದೆ.

ಈ ವಿಡಿಯೋವನ್ನು ಪತಾಂಜಲಿ ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!