fbpx

ರೂಪದರ್ಶಿಯರ ಜೊತೆ ‘ಕ್ಯಾಟ್ ವಾಕ್’ ಮಾಡಿದ ಬೆಕ್ಕು, ವೈರಲ್ ವಿಡಿಯೋ ನೋಡಿ

ಎಲ್ಲಿಂದಲೋ ಬಂದ ಬೆಕ್ಕೊಂದು ಕ್ಯಾಟ್‌ವಾಕ್ ಮಾಡುತ್ತಿದ್ದ ರೂಪದರ್ಶಿಯರ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಶನ್ ಶೋನಲ್ಲಿ ರೂಪದರ್ಶಿಯರು ಬೆಕ್ಕಿನ ನಡಿಗೆ ಹಾಕುತ್ತಿದ್ದರೆ ಅಲ್ಲಿಗೆ ನೈಜ ಬೆಕ್ಕು ಲಗ್ಗೆ ಇಟ್ಟಿದೆ.

ರೂಪದರ್ಶಿಯರು ರಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಇತ್ತ ಬೆಕ್ಕು ರಾಂಪ್ ಮದ್ಯದಲ್ಲಿ ಅಡ್ಡ ಬಂದು ತೊಂದರೆ ಕೊಡುತ್ತಾ ಕುಳಿತಿತ್ತು. ಕೊನೆಗೆ ರಾಂಪ್ ನ ತುದಿಯಲ್ಲಿ ನಿಂತು ಅಲ್ಲಿಗೆ ಬಂದ ಮಾಡೆಲ್ ಒಬ್ಬರ ಕಾಲಿನ‌ ಮೇಲೆ ಹಾರಲು ಯತ್ನಿಸಿದೆ.

ಎರಡು ವರ್ಷಗಳ ಹಿಂದೆ ಇಸ್ತಾನ್ ಬುಲ್ ನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಈ ಘಟನೆ ನಡೆದಿದ್ದು ಇದೀಗ ವಿಡಿಯೋ ಮತ್ತೆ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!