fbpx

‘ಮೊಘಲ್ ಮೂಸಿಯಂ’ ಹೆಸರನ್ನು ಕಿತ್ತೊಗೆದು ಮರುನಾಮಕರಣ ಮಾಡಿದ ಯೋಗಿ! ಹೊಸ ಹೆಸರು ಏನು ಗೊತ್ತೇ? ಇಲ್ಲಿದೆ ಡಿಟೈಲ್ಸ್

ಉತ್ತರಪ್ರದೇಶದ ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ ಮ್ಯೂಸಿಯಂಗೆ ‘ಮೊಘಲ್ ಮ್ಯೂಸಿಯಂ’ ಹೆಸರಿನ ಬದಲು ‘ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ’ ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯ‌ನಾಥ್ ಮುಂದಾಗಿದ್ದಾರೆ.

ಈ ಬಗ್ಗೆ ಸೋಮವಾರದಂದು ಆಗ್ರಾ ವಿಭಾಗದ ಅಭಿವೃದ್ಧಿ ಕಾರ್ಯಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನುಮೋದನೆ ನೀಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ‘ಮೊಘಲ್ ಮ್ಯೂಸಿಯಂ’ ಎಂದು ಇಡಲಾಗಿದ್ದ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ’ ಎಂದು ಬದಲಾಯಿಸಲು ಆದೇಶಿಸಿದ್ದಾರೆ.

ಗುಲಾಮಗಿರಿ ಮನಸ್ಥಿತಿಯನ್ನು ತೊಡೆದುಹಾಕುವ ಮೂಲಕ ರಾಷ್ಟ್ರೀಯ ಸಿದ್ಧಾಂತಗಳನ್ನು ಪೋಷಿಸುವುದು ಉತ್ತರಪ್ರದೇಶ ಸರ್ಕಾರದ ಮೊದಲ ಆದ್ಯತೆ. ನಮ್ಮ ರಾಷ್ಟ್ರಕ್ಕೆ ಹೆಮ್ಮೆ ಉಂಟು ಮಾಡುವ ವಿಚಾರಗಳನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ದೇಶವನ್ನು ಕೊಳ್ಳೆ ಹೊಡೆದು, ರಕ್ತಪಾತ ನಡೆಸಿದ ಮೊಘಲರು ಯಾವತ್ತೂ ನಮಗೆ ನಾಯಕರು ಅಲ್ಲ. ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ನಿಜವಾದ ಹೀರೋ. ಮ್ಯೂಸಿಯಂನಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಂಬಂಧಪಟ್ಟ ವಸ್ತುಗಳು, ದಾಖಲೆಗಳನ್ನು ಇಡಲಾಗುವುದು ಅಲ್ಲದೆ ಅದಕ್ಕೆ ಸಂಬಂಧಪಟ್ಟಂತೆ ಗ್ಯಾಲರಿ ನಿರ್ಮಾಣ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಮತ್ತು ಆಗ್ರಾ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

Watch Video

error: Content is protected !!