ಮೊಸಳೆಗಳು ಬೇಟೆಯಾಡೋದರಲ್ಲಿ ಚಾಣಾಕ್ಷ ಜೀವಿಗಳು. ನೀರಿನಲ್ಲಂತೂ ಕ್ಷಣ ಮಾತ್ರದಲ್ಲಿ ಬೇಟೆಯನ್ನು ಹಿಡಿದು ಕಣ್ಮರೆಯಾಗುವ ತಾಕತ್ತು ಮೊಸಳೆಗಳಿಗಿದೆ.
ಇದೀಗ ಇದೇ ಮೊಸಳೆಯ ಬೇಟೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಸಳೆಯೊಂದು ಝೀಬ್ರಾವನ್ನು ಬೇಟೆಯಾಡಲು ಹೋಗಿ ವಿಫಲವಾಗಿರುವ ವಿಡಿಯೋ ಇದಾಗಿದೆ.
ಝೀಬ್ರಾವೊಂದು ನದಿ ದಾಟಿ ಇನ್ನೇನು ದಡಕ್ಕೆ ತಲುಪಿತು ಎನ್ನುವಷ್ಟರಲ್ಲಿ ನೀರಿನಲ್ಲಿ ವೇಗವಾಗಿ ಬಂದ ಮೊಸಳೆಯೊಂದು ಅದರ ಮೇಲೆ ಎರಗಲು ಯತ್ನಿಸಿದೆ. ಆದರೆ ಝೀಬ್ರಾ ಆಯಸ್ಸು ಗಟ್ಟಿಯಿತ್ತು, ಕೆಲವೇ ಅಡಿಗಳ ಅಂತರದಿಂದ ಮೊಸಳೆಯ ಬಾಯಿಯಿಂದ ಪಾರಾಗಿದೆ.
ಒಂದು ವೇಳೆ ಝೀಬ್ರಾ ಮೊಸಳೆಯ ಬಾಯಿಗೆ ಸಿಕ್ಕಿದ್ದರೆ ಅದನ್ನು ಕಾಪಾಡಲು ಯಾರಿಂದಲು ಸಾಧ್ಯವಿರಲಿಲ್ಲ. ವೈರಲ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ,
Watch Video
