fbpx

ಆಹಾರ ಅರಸಿ ಬಂದ ಬೀದಿ ನಾಯಿಯನ್ನು ಎತ್ತಿ ನದಿಗೆಸೆದ ‘ಸಲ್ಮಾನ್ ಖಾನ್’, ಶಾಕಿಂಗ್ ವಿಡಿಯೋ ನೋಡಿ

ಪ್ರಾಣಿಗಳ ಮೇಲಿನ ಹಿಂಸಾಚಾರದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತೆ. ಈ ಹಿಂದೆ ಟಿಕ್‌ಟಾಕ್‌ನಲ್ಲಿ ಫೇಮಸ್ ಆಗಲು ಪ್ರಾಣಿಗಳಿಗೆ ಬೆಂಕಿ ಹಚ್ಚೋದು, ಕಟ್ಟಡದಿಂದ ಎಸೆಯೋ ಮೂಲಕ ವಿಡಿಯೋ ಮಾಡಿ ವೈರಲ್ ಮಾಡಲಾಗುತ್ತಿತ್ತು.

ಇದೀಗ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೊಬ್ಬ ಬೀದಿನಾಯಿಯನ್ನು ಎತ್ತಿ ನದಿಗೆ ಎಸೆದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾನೆ.

ಗೆಳೆಯರೊಂದಿಗೆ ಪಾರ್ಟಿ ಮಾಡಲು ಬ್ರಿಡ್ಜ್ ಮೇಲೆ ತೆರಳಿದ್ದ ಯುವಕ ಆಹಾರ ಅರಸಿ ಬಂದ ಬೀದಿನಾಯಿಯನ್ನು ಎತ್ತಿ ಬ್ರಿಡ್ಜ್‌ನಿಂದ ನದಿಗೆ ಎಸೆದಿದ್ದಾನೆ. ಭೋಪಾಲ್‌ನ ಶ್ಯಾಮ್ಲಾ ಹಿಲ್ಸ್ ಪ್ರದೇಶದ ಬೋಟ್ ಕ್ಲಬ್‌ ಪಕ್ಕದಲ್ಲಿರುವ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಭೋಪಾಲ್ ನಗರದ ತಿಲಾ ಜಮಾಲ್ಪುರಾ ಪ್ರದೇಶದ ನಿವಾಸಿ ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಆತ ಈ ಹಿಂದೆಯೋ ಇದೇ ರೀತಿ ಪ್ರಾಣಿಗಳ ಮೇಲೆ ಹಿಂಸಾಚಾರ ನಡೆಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಯೋಗಿ ಆದಿತ್ಯನಾಥ್ ಹತ್ಯೆಗೆ ಸಂಚು ರೂಪಿಸಿದ್ದವನ ಪರಿಸ್ಥಿತಿ ಏನಾಗಿದೆ ನೋಡಿ

ಸದ್ಯ ಪೋಲೀಸರು ಆರೋಪಿ ಸಲ್ಮಾನ್ ಖಾನ್ ಜೊತೆಗೆ, ವಿಡಿಯೋ ಚಿತ್ರೀಕರಿಸಿದಾತನ ಹುಡುಕಾಟದಲ್ಲೂ ತೊಡಗಿದ್ದಾರೆ. ಈ ಬಗ್ಗೆ ಆರೋಪಿಯ ಕೆಲ ಸ್ನೇಹಿತರನ್ನು ವಶಕ್ಕೆ ಪಡೆದಿರುವ ಪೋಲೀಸರು ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಸ್ನೇಹಿತರ ಪ್ರಕಾರ ಈ ವಿಡಿಯೋ ಹಳೆಯದಾಗಿದ್ದು, ಇದೀಗ ಮತ್ತೆ ವೈರಲ್ ಆಗುತ್ತಿದೆ ಎಂದು ತಿಳಿದುಬಂದಿದೆ.

ಆರೋಪಿ ನೀರಿಗೆ ಎಸೆದ ನಾಯಿ ಸತ್ತಿದೆಯೋ ಅಥವಾ ಜೀವಂತವಾಗಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ಸನೇಹಿ ಮಿಶ್ರಾ ಅವರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 429 (ಯಾವುದೇ ಪ್ರಾಣಿಗಳನ್ನು ಕೊಲ್ಲುವ ಅಥವಾ ದುರುಪಯೋಗಪಡಿಸಿಕೊಳ್ಳುವ ಮೂಲಕ ಕಿಡಿಗೇಡಿತನ) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!