fbpx

Please assign a menu to the primary menu location under menu

ಚೀನೀ ಸೈನಿಕನ ಕೈಯಲ್ಲೇ ಸ್ಫೋಟಗೊಂಡ ‘ಮೇಡ್ ಇನ್ ಚೈನಾ’ ರಾಕೆಟ್ ಲಾಂಚರ್, ವೈರಲ್ ವಿಡಿಯೋ ನೋಡಿ

ಲಡಾಖ್ ಗಡಿಯಲ್ಲಿ ಭಾರತದ ಮೇಲೆ ದಾಳಿಗೆ ಚೀನಾ ಸೇನೆ ಹೊಂಚು ಹಾಕಿ ಕುಳಿತಿದೆ. ಅಲ್ಲಿ ಭಾರೀ ಪ್ರಮಾಣದಲ್ಲಿ ಯೋಧರನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿರುವ ಚೀನಾ ಸರ್ಕಾರ, ಸಮರಾಭ್ಯಾಸ ನಡೆಸುತ್ತಿರೋ ಬಗ್ಗೆಯೂ ವರದಿಯಾಗಿದೆ.

ಇದೀಗ ಇದೇ ಚೀನಾ ಸೇನೆಯ ಸಮರಾಭ್ಯಾಸದ ವೇಳೆ ನಡೆದ ಅವಘಡದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ ಪಿಎಲ್‌ಎ ಸೈನಿಕರು ನಡೆಸಿದ ಸಮರಾಭ್ಯಾಸದ ವಿಡಿಯೋ ಇದಾಗಿದ್ದು, ಸಖತ್ ಟ್ರೋಲ್‌ಗೆ ಕಾರಣವಾಗಿದೆ.

ಭಾರತದ ಮೇಲೆ ಯುದ್ಧದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಬೆದರಿಕೆ ಹಾಕಿ ಸುದ್ದಿ ಪ್ರಕಟಿಸುವ ಚೀನಾ ಸರ್ಕಾರದ ಒಡೆತನದ ಪತ್ರಿಕೆಗಳನ್ನು ಟಾಗ್ ಮಾಡಿ ಭಾರತೀಯರು ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಪಿಎಲ್‌ಎ ಸೈನಿಕನೊಬ್ಬ ರಾಕೆಟ್ ಲಾಂಚರ್ ಮೂಲಕ ಸಮರಾಭ್ಯಾಸ ಮಾಡುವ ವೇಳೆ ರಾಕೆಟ್ ಜೊತೆ ಲಾಂಚರ್ ಕೂಡ ಸ್ಫೋಟ ಗೊಂಡಿರೋದು ಕಾಣುತ್ತದೆ.

ಮೊದಲೇ ‘ಮೇಡ್ ಇನ್ ಚೀನಾ’ ವಸ್ತುಗಳ ಬಗ್ಗೆ ಜನರಿಗೆ ನಂಬಿಕೆ ಕಮ್ಮಿ. ಅವುಗಳ ಬಾಳಿಕೆ ಅಷ್ಟಕ್ಕಷ್ಟೆ, ಒಮ್ಮೆ ಬಳಸಿದ್ರೆ ಮತ್ತೊಮ್ಮೆ ಅದು ಉಪಯೋಗಕ್ಕೆ ಬರೋದೆ ಡೌಟ್. ಇಂತದ್ದರಲ್ಲಿ ಚೀನಾ ಸೇನೆಯ ಶಸ್ತ್ರಾಸ್ತ್ರಗಳೂ ಹಿಂಗೇನಾ? ಇವನ್ನು ಇಟ್ಟುಕೊಂಡು ಇವರು ಯುದ್ಧದ ಬೆದರಿಕೆ ಹಾಕೋದ ಎಂದು ಜನ ಟ್ರೋಲ್ ಮಾಡುತ್ತಿದ್ದಾರೆ.

ತಮ್ಮ ಶಸ್ತ್ರಾಸ್ತ್ರಗಳ ಮೇಲೆ ನಂಬಿಕೆ ಇಲ್ಲದಿರೋದಕ್ಕೆ ಚೀನಾ ಸೇನೆ ಗಾಲ್ವಾನ್ ಕಣಿವೆಯಲ್ಲಿ ದೊಣ್ಣೆ, ರಾಡ್‌ಗಳ ಮೂಲಕ ದಾಳಿ ಮಾಡಿದ್ದು ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

video
error: Content is protected !!