fbpx

Please assign a menu to the primary menu location under menu

ಬಡ ಬೀದಿ ವ್ಯಾಪಾರಿಯ ತಳ್ಳುಗಾಡಿಗೆ ಒದ್ದು ಕೆಳಕ್ಕೆ ಬೀಳಿಸಿದ ಪೊಲೀಸರು, ವೈರಲ್ ವಿಡಿಯೋ ನೋಡಿ

ಬೀದಿಬದಿ ಹಣ್ಣಿನ ವ್ಯಾಪಾರಿಯ ಮೇಲೆ ಪೋಲೀಸರು ಅಮಾನವೀಯವಾಗಿ ನಡೆದುಕೊಂಡ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಲೀಸರ ವರ್ತನೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರೋನಾ ಸಂಕಷ್ಟದಿಂದ ಬೀದಿ ವ್ಯಾಪಾರಿಗಳು, ದಿನಗೂಲಿ ನೌಕರರ ಪಾಡು ಹೇಳತೀರದಾಗಿದೆ. ಒಂದು ಹೊತ್ತಿನ ಅನ್ನಕ್ಕೂ ಕಷ್ಟ ಪಡುವ ಸ್ಥಿತಿ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಪೋಲೀಸರು ಬೀದಿ ಬದಿ ವ್ಯಾಪಾರಿಯ ಜೊತೆ ನಡೆದುಕೊಂಡ ರೀತಿ ಜನರ ಕೋಪಕ್ಕೆ ಕಾರಣವಾಗಿದೆ.

ಘಟನೆ ನಡೆದಿರೋದು ಕಣ್ಣೂರಿನಲ್ಲಿ, ಮಾರ್ಕೆಟ್‌ನಲ್ಲಿ ಬೀದಿ ಬದಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಸಾಜಿದ್ ಎಂಬಾತನಲ್ಲಿ ಪೋಲೀಸರು ಬೀದಿ ಬದಿ ವ್ಯಾಪಾರ ಮಾಡದಂತೆ ತಾಕೀತು ಮಾಡಿದ್ದಾರೆ. ಆತ ಅದಕ್ಕೆ ನಿರಾಕರಿಸಿದ್ದು, ಹತ್ತು ವರ್ಷದಿಂದ ಬೀದಿಬದಿ ವ್ಯಾಪಾರ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ, ನನಗೆ ಬೇರೆ ಕೆಲಸ ಮಾಡಿ ಗೊತ್ತಿಲ್ಲ ಎಂದು ಪೋಲೀಸರಲ್ಲಿ ಹೇಳಿಕೊಂಡಿದ್ದಾನೆ.

ಇಷ್ಟಕ್ಕೇ ಸಿಟ್ಟಾದ ಪೊಲೀಸ್ ಅಧಿಕಾರಿ ಆತನ ಹಣ್ಣಿನ ಗಾಡಿಯನ್ನು ಕಾಲಿನಿಂದ ಒದ್ದು ಕೆಳಕ್ಕೆ ಬೀಳಿಸಿದ್ದಾರೆ. ಪೋಲೀಸರ ದುರ್ವರ್ತನೆಯನ್ನು ಅಲ್ಲೇ ಇದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವೈರಲ್ ಆಗಿದೆ.

ವಿಡಿಯೋ ವೈರಲ್ ಆದರೂ ಸುಮ್ಮನಾಗದ ಪೋಲೀಸರು ಮತ್ತೆ ಸಾಜಿದ್‌ನನ್ನು ಠಾಣೆಗೆ ಕರೆಸಿ ಮೊಬೈಲ್ ವಶಪಡಿಸಿಕೊಂಡು ಅದರಲ್ಲಿದ್ದ ಎಲ್ಲಾ ಫೈಲ್‌ಗಳನ್ನು ಡಿಲೀಟ್ ಮಾಡಿ ತೊಂದರೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರದಂದು ಠಾಣೆಯಿಂದ ಬಿಟ್ಟು ಕಳಿಸಿದ್ದು, ಈ ಸಂದರ್ಭದಲ್ಲಿ ಮತ್ತೆ ರಸ್ತೆ ಬದಿ ವ್ಯಾಪಾರ ಮಾಡದಂತೆ ತಾಕೀತು ಮಾಡಿದ್ದಾರೆ.

Watch Video

video
error: Content is protected !!