fbpx

ವೈರಲ್ ಆಗಿದ್ದ ಜಾಗದಲ್ಲೆ ತನ್ನ ಸೆಡಾನ್ ಕಾರು ಪಾರ್ಕ್ ಮಾಡಲು ಹೋದ ಚಾಲಕ, ಮುಂದೇನಾಯಿತು ನೋಡಿ!

ಕೆಲದಿನಗಳ ಹಿಂದೆ ಕೇರಳದ ಕಾರು ಚಾಲಕನೊಬ್ಬನ ಪಾರ್ಕಿಂಗ್ ಸ್ಕಿಲ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತ ಕಾರು ಪಾರ್ಕಿಂಗ್ ಮಾಡಿದ ಜಾಗ ಜನರ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು.

ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಕಾರು ಚಾಲಕನೊಬ್ಬ ಅದೇ ಜಾಗದಲ್ಲಿ ತನ್ನ ಕಾರು ಪಾರ್ಕ್ ಮಾಡುವ ಕಸರತ್ತಿಗೆ ಕೈ ಹಾಕಿದ್ದಾನೆ. ತನ್ನ ಕಪ್ಪುಬಣ್ಣದ ಸೆಡಾನ್ ಕಾರನ್ನು ಅದೇ ಕಾಂಕ್ರಿಟ್ ಸ್ಲಾಬ್ ಮೇಲೆ ಪಾರ್ಕ್ ಮಾಡಲು ಹರಸಾಹಸ ಪಟ್ಟಿದ್ದಾನೆ.

ಆತ ಕಾರು ಪಾರ್ಕ್ ಮಾಡುತ್ತಾನೋ ಇಲ್ಲವೋ ಎಂದು ನೋಡಲು ಅನೇಕ ಜನರು ಸುತ್ತಮುತ್ತ ನಿಂತಿರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋವನ್ನು ಕೆಲವರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ.

ಇದನ್ನೂ ಓದಿ:  ಅಪರೂಪದ ಎರಡು ತಲೆಯ ಹಾವು ಪತ್ತೆ, ವೈರಲ್ ವಿಡಿಯೋ ನೋಡಿ

ವ್ಯಕ್ತಿ ತನ್ನ ಸೆಡಾನ್ ಕಾರು ಪಾರ್ಕ್ ಮಾಡಲು ಬಹಳ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!