fbpx

ರಸ್ತೆ ದಾಟುವಾಗ ಬಸ್ ಚಕ್ರಕ್ಕೆ ಸಿಲುಕಿದ ಮಹಿಳೆ, ಸಾರ್ವಜನಿಕರು ಮಾಡಿದ್ದೇನು ನೋಡಿ! ವೈರಲ್ ವಿಡಿಯೋ

ರಸ್ತೆ ದಾಟುವ ವೇಳೆ ಮಹಿಳೆಯೊಬ್ಬರು ಬಸ್ ಚಕ್ರದಡಿ ಸಿಲುಕಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ದಾಟುತ್ತಿದ್ದಂತೆ ಎದುರಿನಿಂದ ಬಂದ ಬಸ್ಸಿನ ಚಕ್ರದಡಿ ಮಹಿಳೆ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾನೆ.

ಮಹಿಳೆಯ ದೇಹದ ಸ್ವಲ್ಪ ಭಾಗ ಬಸ್‌ನ ಮುಂದಿನ ಚಕ್ರದಡಿ ಸಿಲುಕಿಕೊಂಡಿತ್ತು, ಬಸ್ ಸ್ವಲ್ಪ ಅಲ್ಲಾಡಿದರೂ ಮಹಿಳೆಯ ಜೀವಕ್ಕೆ ಅಪಾಯವಾಗುವ ಸಂಭವವಿತ್ತು. ಕೂಡಲೇ ಸುತ್ತ ಮುತ್ತಲಿದ್ದ ಸಾರ್ವಜನಿಕರು ಬಸ್ಸನ್ನು ಎತ್ತಿ ಮಹಿಳೆಯನ್ನು ಚಕ್ರದಿಂದ ಬಿಡುಗಡೆಗೊಳಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಬಸ್ ಎತ್ತೋದು ಏನು ಅಷ್ಟು ಸುಲಭದ ಕೆಲಸವಲ್ಲ. ಆದರೂ ಛಲ ಬಿಡದ ಸಾರ್ವಜನಿಕರು ಬಸ್ಸನ್ನು ಒಂದು ಬದಿಯಿಂದ ಮೇಲಕ್ಕೆ ಎತ್ತುವ ಮೂಲಕ ಚಕ್ರದಡಿ ಸಿಲುಕಿಕೊಂಡಿದ್ದ ಮಹಿಳೆಯ ಜೀವ ಕಾಪಾಡಿದ್ದಾರೆ.

ಈ ಘಟನೆ ನಡೆದಿರೋದು ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ. ಮಹಿಳೆಯ ಜೀವ ಕಾಪಾಡಿದ ಸಾರ್ವಜನಿಕರ ಬಗ್ಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ವಿಡಿಯೋ ನೋಡಿ,

Watch Video

video

error: Content is protected !!