fbpx

Please assign a menu to the primary menu location under menu

ಪಾಕ್ ಪ್ರೇಮಿಗಳಿಗೆ ಬಿಸಿ ಮುಟ್ಟಿಸಿ ಮುಸ್ಲಿಂ ಲೀಗ್ ಧ್ವಜ ತೆರವುಗೊಳಿಸಿದ ಬೆಂಗಳೂರು ಪೊಲೀಸರು! ವೈರಲ್ ವಿಡಿಯೋ‌ ನೋಡಿ

ಬೆಂಗಳೂರಿನಲ್ಲಿ ಇತ್ತೀಚಿಗೆ ಮುಸ್ಲಿಂ ಲೀಗ್ ಪಾರ್ಟಿಯ ಧ್ವಜ ಹಾಕಿಕೊಂಡು ಸಂಚರಿಸುತ್ತಿದ್ದ ಕಾರನ್ನು ತಡೆದ ಟ್ರಾಫಿಕ್ ಪೊಲೀಸರು, ಕಾರಿನ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೂಡಲೇ ಆ ಧ್ವಜವನ್ನು ತೆರವು ಮಾಡಿ ಭಾರತ ಧ್ವಜವನ್ನು ಹಾಕಿದ್ದಾರೆ.

ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹೋಲುವ ಮುಸ್ಲಿಂ ಲೀಗ್‌ನ ಈ ಧ್ವಜದಿಂದಾಗಿ ಭಾರತದಾದ್ಯಂತ ಹಲವು ಕಡೆ ಗಲಭೆಗಳು ನಡೆದಿದೆ. ಭಾರತದ ವಿಭಜನೆಯಲ್ಲಿ ಮುಸ್ಲಿಂ ಲೀಗ್‌ನ ಪಾತ್ರ ಪ್ರಮುಖವಾಗಿತ್ತು. ಇದೀಗ ಅದೇ ಮುಸ್ಲಿಂ ಲೀಗ್‌ನ ಧ್ವಜವನ್ನು ಕೇರಳದ IUML ತನ್ನ ಪಕ್ಷದ ಧ್ವಜವಾಗಿ ಬಳಸುತ್ತಿದೆ.

ಈ ಬಗ್ಗೆ ಈಗಾಗಲೇ ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಾಸಿಮ್ ರಿಜ್ವಿ ಅವರು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದು, ಭಾರತದಲ್ಲಿ ಆ ಧ್ವಜ ಬಳಕೆಯನ್ನು ನಿಷೇಧಿಸುವಂತೆ ಕೇಳಿಕೊಂಡಿದ್ದರು.

ಪಾಕಿಸ್ತಾನದ ಮುಸ್ಲಿಂ ಲೀಗ್‌ನ ಧ್ವಜವನ್ನೇ ಹೋಲುವ IUML ಧ್ವಜದಿಂದಾಗಿ ಭಾರತದಲ್ಲಿ ಸಾಕಷ್ಟು ಕಡೆ ಕೋಮುಗಲಭೆಗಳು ನಡೆದಿದೆ, ಮುಸ್ಲಿಂ ಲೀಗ್ ಧ್ವಜಕ್ಕೂ ಇಸ್ಲಾಂ‌ಗೂ ಯಾವುದೇ ಸಂಬಂಧವಿಲ್ಲ. ಗಲಭೆಗೆ ಕಾರಣವಾಗುತ್ತಿರುವ ಆ ಧ್ವಜದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.

ಆದರೂ ಇಂದಿಗೂ ಮಾನಗೆಟ್ಟ ಪಾಕಿಸ್ತಾನ ಪ್ರೇಮಿ IUML ಪಕ್ಷ ತನ್ನ ಧ್ವಜವನ್ನು ಬದಲಿಸಿಲ್ಲ. ಇದೀಗ ಬೆಂಗಳೂರಿನಲ್ಲಿ ಇದೇ ಧ್ವಜ ಕಾರಿಗೆ ಸಿಕ್ಕಿಸಿಕೊಂಡು ಸಾಗುತ್ತಿದ್ದ ಕಾರು ತಡೆದ ಟ್ರಾಫಿಕ್ ಪೊಲೀಸ್ ಭಾರತದ ರಾಷ್ಟ್ರಧ್ವಜ ಸಿಕ್ಕಿಸಿ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Watch Video

video
error: Content is protected !!