fbpx

Please assign a menu to the primary menu location under menu

ಪ್ರಿಯಕರನೊಂದಿಗೆ ಹೋಟೇಲ್ ರೂಮಿನಲ್ಲಿದ್ದ ವಿವಾಹಿತ ಮಹಿಳೆ! ಪತಿಯ ದಿಢೀರ್ ಎಂಟ್ರಿ! ಮುಂದೇನಾಯಿತು ನೋಡಿ, ವೈರಲ್ ವಿಡಿಯೋ

ವಿವಾಹಿತ ಮಹಿಳೆ‌ ಪ್ರಿಯಕರನ ಹೋಟೇಲ್ ರೂಮಿನಲ್ಲಿ ಚಕ್ಕಂದವಾಡುವಾಗಲೇ ಪತಿಯ ಕೈಗೆ ರೆಡ್‌ಹ್ಯಾಂಡ್ ಸಿಕ್ಕಿಬಿದ್ದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಾಗಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನ ಜೊತೆ ಹೊಟೇಲ್ ರೂಮಿನಲ್ಲಿ ಇರೋ ಬಗ್ಗೆ ತಿಳಿದಿದ್ದೇ ತಡ, ಪತಿ ದಾಳಿ ಮಾಡಿದ್ದಾನೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಾಜ್‌ಗಂಜ್ ಪ್ರದೇಶದ ಹೊಟೇಲ್ ಒಂದಕ್ಕೆ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜೊತೆ ತೆರಳಿದ್ದಳು. ಪತ್ನಿಯ ಚಲನವಲನಗಳ ಬಗ್ಗೆ ಅನುಮಾನ ಹೊಂದಿದ್ದ ಪತಿ ಆಕೆಯನ್ನು ಹಿಂಬಾಲಿಸಿಕೊಂಡು ತೆರಳಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ತನ್ನ ಪ್ರಿಯಕರನ ಜೊತೆ ಹೊಟೇಲ್ ಒಂದರಲ್ಲಿ ರೂಮ್ ಬುಕ್ ಮಾಡಿ ಒಳಗೆ ತೆರಳಿದ್ದಾಳೆ.

ಪತ್ನಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದ ಪತಿಗೆ ತನ್ನ ಪತ್ನಿಯ ಅನೈತಿಕ ಸಂಬಂಧ ಖಚಿತವಾಗುತ್ತಿದ್ದಂತೆ ಹೋಟೇಲ್ ರೂಮ್ ಒಳಕ್ಕೆ ನುಗ್ಗಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಭಾರಿಸಿದ್ದಾನೆ. ತನ್ನ ಜೊತೆ ಸಂಬಂಧಿಕರಿಂದ ಇದನ್ನೆಲ್ಲ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಸಿಕೊಂಡಿದ್ದಾನೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಇಬ್ಬರನ್ನು ಠಾಣೆಗೆ ಕರೆಸಿದ್ದಾರೆ. ಆದರೆ ಎರಡೂ ಕಡೆಯವರು ದೂರು ನೀಡಲು ಒಪ್ಪದ ಕಾರಣ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಅವರು ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!