fbpx

ಉದ್ಧವ್ ಠಾಕ್ರೆ ಕುರಿತ ಕಾರ್ಟೂನ್ ಹಂಚಿಕೊಂಡ ನಿವೃತ್ತ ನೌಕಾಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಶಿವಸೇನೆ ಗೂಂಡಾಗಳು, ಶಾಕಿಂಗ್ ವಿಡಿಯೋ ನೋಡಿ

ಕೇವಲ‌ ಕಾರ್ಟೂನ್ ಹಂಚಿಕೊಂಡಿದ್ದಕ್ಕೆ ನಿವೃತ್ತ ನೌಕಾಧಿಕಾರಿ ಮೇಲೆ ಶಿವಸೇನೆ ಗೂಂಡಾ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಟ್ರೋಲ್ ಮಾಡಿ ಬಿಡಿಸಲಾಗಿದ್ದ ಕಾರ್ಟೂನ್ ಹಂಚಿಕೊಂಡಿದ್ದಕ್ಕೆ ಈ ದಾಳಿ ನಡೆದಿದೆ.

ತಮ್ಮ ಮೇಲೆ ಕ್ಷುಲ್ಲಕ ಕಾರಣಕ್ಕೆ ಶಿವಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾಗಿ ಆರೋಪಿಸಿ ನಿವೃತ್ತ ನೌಕಾಧಿಕಾರಿ ಮದನ್ ಶರ್ಮಾ ಅವರು ಮುಂಬೈನ ಸಮತಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕೇವಲ ಕಾರ್ಟೂನ್ ಫಾರ್ವರ್ಡ್ ಮಾಡಿದ್ದಕ್ಕಾಗಿ ನನಗೆ ಬೆದರಿಕೆ ಕರೆಗಳು ಬಂದಿದ್ದು, ಶಿವಸೇನೆಯ ಎಂಟರಿಂದ ಹತ್ತು ಕಾರ್ಯಕರ್ತರ ಗುಂಪು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ನನ್ನ ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿರುವ ನನ್ನ ಮೇಲೆ ಕ್ಷುಲ್ಲಕ ಕಾರಣಕ್ಕೆ ಶಿವಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇಂತಹ ಸರ್ಕಾರ ಅಸ್ತಿತ್ವದಲ್ಲಿರಬಾರದು ಎಂದು ಶಿವಸೇನೆಯ ವಿರುದ್ಧ ಕಿಡಿಕಾರಿದ್ದಾರೆ. ಘಟನೆಯಲ್ಲಿ ಮದನ್ ಶರ್ಮಾ ಅವರ ಕಣ್ಣಿಗೆ ಗಂಭೀರ ಗಾಯಗಳಾಗಿದೆ.

ನಿವೃತ್ತ ನೌಕಾಧಿಕಾರಿ ಮೇಲೆ ಹಲ್ಲೆನಡೆಸಿದ ಆರೋಪದಲ್ಲಿ ಶಿವಸೇನಾ ಸ್ಥಳೀಯ ಶೇಖಾ ಪ್ರಮುಖ್ ಕಮಲೇಶ್ ಕದಮ್ ಮತ್ತು ಪಕ್ಷದ ಕಾರ್ಯಕರ್ತ ಸಂಜಯ್ ಮಾಂಜ್ರೆ ಅವರನ್ನು ಸಮತಾ ನಗರ ಪೊಲೀಸರು ಬಂಧಿಸಿದ್ದಾರೆ. ಹೆಚ್ಚುವರಿ ಆಯುಕ್ತ ದಿಲೀಪ್ ಸಾವಂತ್ ಅವರು ದಾಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Watch Video

video

error: Content is protected !!