fbpx

ಪುಟ್ಟ ಮಗುವಿನ ಕಣ್ಣ ಮುಂದೆಯೇ ಸುಟ್ಟು ಕರಕಲಾದ ತಾಯಿ, ಶಾಕಿಂಗ್ ವಿಡಿಯೋ

ತಾಯಿಯೊಬ್ಬಳು ತನ್ನ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡೆಹ್ರಾಡೂನ್‌ನ ತ್ಯಾಗಿ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ಹತ್ತಿರದ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳು ಸೆರೆಯಾಗಿದೆ.

ಮೃತ ಮಹಿಳೆಯನ್ನು 28ವರ್ಷ ವಯಸ್ಸಿನ ಪೂನಮ್ ದಿಮನ್ ಎಂದು ಗುರುತಿಸಲಾಗಿದ್ದು ತನ್ನ ಒಂದು ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಹಿಳೆ ತನ್ನ ಮಗುವನ್ನು ತಬ್ಬಿಕೊಂಡು ದೇಹದ ತುಂಬಾ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.


Continue Reading

ಅದೃಷ್ಟವಶಾತ್ ಬೆಂಕಿ ಹಚ್ಚಿಕೊಳ್ಳುವ ಸಂದರ್ಭದಲ್ಲಿ ಮಗು ಮಹಿಳೆಯ ಕೈಜಾರಿ ಕೆಳಕ್ಕೆ ಬಿದ್ದಿದ್ದು, ಮಹಿಳೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾಳೆ. ತಕ್ಷಣ ಸುತ್ತಮುತ್ತಲಿದ್ದ ಜನರು ಓಡಿಬಂದು ನೀರು ಸುರಿದು ಬೆಂಕಿ ಆರಿಸಿದ್ದಾರೆ.

ಇದನ್ನೂ ಓದಿ:  ನೋಡನೋಡುತ್ತಿದ್ದಂತೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು ಲಾರಿ, ವೈರಲ್ ವಿಡಿಯೋ ನೋಡಿ

ಮಹಿಳೆಯನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಕೆಯ ದೇಹ ಬೆಂಕಿಯಲ್ಲಿ ಬೆಂದು ಹೋಗಿದ್ದ ಕಾರಣ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಮಹಿಳೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೋಲೀಸರು ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Watch Video

Trending Short Videos


close

This will close in 26 seconds

error: Content is protected !!