ವಿವಾದಿತ ಭಾಷಣಗಳಿಂದಲೇ ಹೆಸರುವಾಸಿಯಾಗಿರುವ ಮತಾಂಧ ಮುಸ್ಲಿಂ ಧರ್ಮಗುರು ಮುಜಾಹಿದ್ ಬಲುಸ್ಸೆರಿ ಇದೀಗ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾನೆ. ಮುಂದಿನ ಹತ್ತು ವರ್ಷಗಳಲ್ಲಿ ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಘೋಷಿಸಿಕೊಂಡಿದ್ದಾನೆ.
ಕೇರಳದಲ್ಲಿರುವ ಹಿಂದೂ ಹಾಗೂ ಕ್ರಿಶ್ಚಿಯನ್ನರಿಗೆ ಬೆದರಿಕೆ ಹಾಕಿರುವ ಮುಜಾಹಿದ್ ಕೇರಳಕ್ಕೆ ಕ್ಯಾಲಿಫೇಟ್ ಎಂದು ಹೆಸರಿಡೋದಾಗಿ ಹೇಳಿಕೊಂಡಿದ್ದಾನೆ. ಪ್ರತೀ ಶುಕ್ರವಾರದಂದು ಕೇರಳದ ಎಲ್ಲಾ ಜಾತಿ, ಪಂಗಡಗಳ ಮುಸ್ಲಿಮರು ಮುಜಾಹಿದ್ ಮಸೀದಿಗಳಿಗೆ ಭೇಟಿ ನೀಡಿದ್ರೆ ಮುಂದಿನ ಹತ್ತು ವರ್ಷಗಳಲ್ಲಿ ಕೇರಳ ಇಸ್ಲಾಮಿಕ್ ರಾಜ್ಯವಾಗಿ ಬದಲಾಗಿಸಬಹುದು ಎಂದು ಹೇಳಿದ್ದಾನೆ.
ಕೇರಳದಲ್ಲಿರುವ ಇತರ ಮುಸ್ಲಿಂ ಧಾರ್ಮಿಕ ಶಾಖೆಗಳನ್ನು ಮುಚ್ಚಿ ಎಲ್ಲಾ ಕಡೆ ಮುಜಾಹಿದ್ಗಳ ಅಡಿಯಲ್ಲಿ ತಂದರೆ ಕೇರಳ ಮುಂದಿನ ಹತ್ತುವರ್ಷದಲ್ಲಿ ಇಸ್ಲಾಮಿಕ್ ಕ್ಯಾಲಿಫೇಟ್ ಆಗೋದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಷ್ಟೇ ಅಲ್ಲದೇ ಹಿಂದೂ ದೇವತೆಗಳ ಬಗ್ಗೆ, ನಂಬಿಕೆಗಳ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾನೆ.
ಈ ಹಿಂದೆಯೂ ವಿವಾದಿತ ಭಾಷಣಗಳನ್ನು ಮಾಡಿದ್ದ ಈ ಮತಾಂಧ ಮುಸ್ಲಿಂ ಧರ್ಮಗುರು, ಹಿಂದೂ ದೇವಾಲಯಗಳನ್ನು ವೈಶ್ಯಾಗೃಹಕ್ಕೆ ಹೋಲಿಸಿದ್ದ. ಕೇರಳ ಪ್ರಮುಖ ಹಿಂದೂ ಧಾರ್ಮಿಕ ಸ್ಥಳ ಗುರುವಾಯೂರು ಕ್ಷೇತ್ರದ ಬಗ್ಗೆ ಮಾತನಾಡಿದ್ದ ಮತಾಂಧ, ‘ಗುರುವಾಯೂರಪ್ಪ ನನ್ನನ್ನು ಉಳಿಸಿ ಎಂದು ಬೇಡುವುದು ನರಕಕ್ಕೆ ದಾರಿ, ವ್ಯಭಿಚಾರ, ಸಲಿಂಗಕಾಮ ಅಥವಾ ಬಡ್ಡಿಗಾಗಿ ಸಾಲ ನೀಡುವುದಕ್ಕಿಂತ ಪಾಪಕಾರ್ಯ’ ಎಂದು ಸಾರ್ವಜನಿಕ ಭಾಷಣದಲ್ಲಿ ಬೊಗಳಿದ್ದ. ಇಷ್ಟೆಲ್ಲಾ ಘಟನೆಗಳು ನಡೆದ್ರೂ ಇನ್ನೂ ಈ ಮತಾಂಧನ ವಿರುದ್ಧ ಯಾವುದೇ ಕೇಸು ದಾಖಲಾಗಿಲ್ಲ.
Watch Video
