fbpx

ಮರಿ ಆನೆಯ ಜಾರುಬಂಡಿ ಆಟಕ್ಕೆ ನೆಟ್ಟಿಗರು ಫಿದಾ! ವೈರಲ್ ವಿಡಿಯೋ ನೋಡಿ

ಜಾರುಬಂಡಿ ಆಟ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಚಿಕ್ಕ ಮಕ್ಕಳಂತು ಜಾರು ಬಂಡಿ ಕಂಡ್ರೆ ಸಾಕು ಆಟವಾಡಲು ಶುರು ಮಾಡುತ್ತಾರೆ. ಎತ್ತರದ ಜಾಗದಿಂದ ಜಾರುತ್ತಾ ಕೆಳಗೆ ಇಳಿಯುವ ಆ ಖುಷಿಯೇ ಬೇರೆ.

ಬರೀ ಮಕ್ಕಳಷ್ಟೇ ಅಲ್ಲ ಪ್ರಾಣಿಗಳ ಮರಿಗಳಿಗೂ ಈ ಆಟ ಎಂದರೆ ಬಲು ಇಷ್ಟ. ಅದಕ್ಕೆ ಸಾಕ್ಷಿಯೇ ಮರಿಯಾನೆಯ ಜಾರುಬಂಡಿಯಾಟದ ಈ ವಿಡಿಯೋ. ಎತ್ತರದ ಪ್ರದೇಶದಿಂದ ಮನೆಯೊಂದು ಆನೆಯೊಂದು ಜಾರಿಕೊಂಡು ಇಳಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಲಾಗಿರುವ ಮರಿ ಆನೆಯ ಈ ತುಂಟಾಟದ ವಿಡಿಯೋ ಕಂಡು ನೆಟ್ಟಿಗರು ಖುಷಿಪಟ್ಟಿದ್ದಾರೆ. ವನ್ಯಲೋಕದ ಇಂತಹ ದೃಶ್ಯಗಳನ್ನು ನೋಡುವಾಗ ನಿಜಕ್ಕೂ ಮನಸ್ಸು ಹಿತವೆನಿಸುತ್ತದೆ.

ಸ್ವಚ್ಛಂದ ಪರಿಸರದಲ್ಲಿ ಪ್ರಾಣಿಗಳ ಸುಂದರ ಬದುಕನ್ನು ನೋಡುವಾಗ ಮನಸ್ಸಿನೊಳಗಿನ ನೋವುಗಳು ಮರೆಯಾಗುತ್ತದೆ. ಇದೇ ಕಾರಣಕ್ಕೆ ಈ ವಿಡಿಯೋ ಎಲ್ಲರಿಗೂ ಇಷ್ಟವಾಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!