fbpx

‘ಸೆಲ್ಫೀ ಹುಚ್ಚು’, 27ನೇ ಮಹಡಿಯಿಂದ ಜಾರಿ ಕೆಳಕ್ಕೆ ಬಿದ್ದ ಮಹಿಳೆ! ಶಾಕಿಂಗ್ ವಿಡಿಯೋ ನೋಡಿ

ಮಹಿಳೆಯೊಬ್ಬರು 27 ನೇ ಮಹಡಿಯ ಬಾಲ್ಕನಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ಸಾವನ್ನಪ್ಪಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತ ಮಹಿಳೆಯನ್ನು 44ವರ್ಷದ ಸಾಂಡ್ರಾ ಮ್ಯಾನುಯೆಲಾ ಡಾ ಕೋಸ್ಟಾ ಮ್ಯಾಸಿಡೊ ಎಂದು ಗುರುತಿಸಲಾಗಿದೆ.

ಘಟನೆ ನಡೆದಿರೋದು ಪನಾಮಾದಲ್ಲಿ, ಮೃತ ಮಹಿಳೆ ಇಬ್ಬರು ಮಕ್ಕಳ ತಾಯಿಯಾಗಿದ್ದು, ಸೆಲ್ಫಿ ತೆಗೆಸಿಕೊಳ್ಳಲು ಬಾಲ್ಕನಿಯ ರೇಲಿಂಗ್ ಮೇಲೆ ಕುಳಿತ ಮಹಿಳೆ ಗಾಳಿಯ ಹೊಡೆತಕ್ಕೆ ಹಿಮ್ಮುಖವಾಗಿ ಕೆಳಕ್ಕೆ ಬಿದ್ದುಬಿಟ್ಟಿದ್ದಾಳೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಸೆಲ್ಫಿಗಳನ್ನು ತೆಗೆದುಕೊಳ್ಳಲು ಸೆಲ್ಫಿಸ್ಟಿಕ್‌ನೊಂದಿಗೆ ಬಾಲ್ಕನಿಯ ರೇಲಿಂಗ್ ಮೇಲೇರಿ ಕೂತ ಮಹಿಳೆ ಕೆಲ‌ನಿಮಿಷಗಳಲ್ಲೇ ಗಾಳಿಯ ಹೊಡೆತಕ್ಕೆ ಸಮತೋಲನವನ್ನು ಕಳೆದುಕೊಂಡು ಕೆಳಕ್ಕೆ ಬಿದ್ದುಬಿಟ್ಟಿದ್ದಾಳೆ.

ಇದನ್ನೂ ಓದಿ:  ಸುಂದರ ಯುವಕ ಏಲಿಯನ್ ಆಗಿ ಬದಲಾಗಿದ್ದು ಹೇಗೆ ಗೊತ್ತೇ? ವೈರಲ್ ವಿಡಿಯೋ ನೋಡಿ

ಹತ್ತಿರದಲ್ಲೇ ನಿರ್ಮಾಣವಾಗುತ್ತಿದ್ದ ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ. ಮಹಿಳೆ ಸೆಲ್ಫಿಗಾಗಿ ಬಾಲ್ಕನಿಯ ಮೇಲೆ ನಡೆದುಕೊಳ್ಳುತ್ತಿದ್ದ ರೀತಿ ನೋಡಿ ಮುಂದೆ ನಡೆಯಲಿದ್ದ ಅಪಾಯದ ಬಗ್ಗೆ ಅವರಿಗೆ ಮೊದಲೇ ಅರಿವಾಗಿತ್ತು.

ದುರಂತದ ನಂತರ ಪನಾಮಾದ ಅಗ್ನಿಶಾಮಕ ಸೇವೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಎಚ್ಚರಿಕೆ ಪ್ರಕಟಿಸಿದೆ. “ಸೆಲ್ಫಿಗಾಗಿ ನಿಮ್ಮ ಪ್ರಾಣವನ್ನು ಅಪಾಯಕ್ಕೆ ತೆಗೆದುಕೊಳ್ಳಬೇಡಿ” ಎಂದು ಅದು ತನ್ನ ಜನರಿಗೆ ಎಚ್ಚರಿಕೆ ನೀಡಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!