fbpx

ವ್ಯಕ್ತಿಯನ್ನು ಅಟ್ಟಾಡಿಸಿ ಭೀಕರವಾಗಿ ಹ’ತ್ಯೆಗೈದ ಗುಂಪು! ಸಿಸಿಟಿವಿಯಲ್ಲಿ ಸೆರೆಯಾಯಿತು ಬೆಚ್ಚಿಬೀಳಿಸುವ ದೃಶ್ಯ

ವ್ಯಕ್ತಿಯೊಬ್ಬನನ್ನು ಮೃಗೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹ’ತ್ಯೆ ಮಾಡಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈ ಪುಲಿಯಂಥೋಪ್ ಎಂಬಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.

ಹತ್ಯೆಯಾದ ವ್ಯಕ್ತಿಯನ್ನು ರಮೇಶ್ ಬಾಬು ಎಂದು ಗುರುತಿಸಲಾಗಿತ್ತು, ಈ ಹಳೆಯ ರೌಡಿ ಶೀಟರ್ ಎಂದು ತಿಳಿದುಬಂದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ 8ಜನರ ಗುಂಪು ವ್ಯಕ್ತಿಯ ಮೇಲೆ ದಾಳಿ ಮಾಡಿ ಕೊಚ್ಚಿ ಕೊ’ಲೆಗೈದಿದೆ.

ಸಿಟಿಟಿವಿ ದೃಶ್ಯದಲ್ಲಿ ಒಂದು ಕಡೆ ಪುಟ್ಟ ಮಕ್ಕಳು ಕಿರಿದಾದ ರಸ್ತೆಯಲ್ಲಿ ಆಟವಾಡುತ್ತಿದ್ದರೆ ದುಷ್ಕರ್ಮಿಗಳ ಗುಂಪು ವ್ಯಕ್ತಿಯೊಬ್ಬನನ್ನು ಅದೇ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿರೋದನ್ನ ಕಾಣಬಹುದಾಗಿದೆ. ಈ ದೃಶ್ಯವನ್ನು ನೋಡಿದ ಮಕ್ಕಳು ಹೆದರಿ ಓಡಿಹೋಗಿದ್ದಾರೆ.

ಇದನ್ನೂ ಓದಿ:  ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

ಕುಸಿದು ನೆಲಕ್ಕೆ ಬಿದ್ದ ರಮೇಶ್ ಬಾಬು ಮೇಲೆ ಎಂಟು ಜನ ದುಷ್ಕರ್ಮಿಗಳು ಮಚ್ಚಿನಿಂದ ಭೀಕರವಾಗಿ ದಾಳಿ ಮಾಡಿದ್ದಾರೆ. ರಮೇಶ್ ಬಾಬು ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರಾದರು ಅದು ಸಾಧ್ಯವಾಗದೇ ಗಂಭೀರ ಗಾಯಗಳಿಂದ ನರಳಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಹತ್ಯೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಎಂಟು ಜನರನ್ನು ಗುರುತಿಸಿರುವ ಚೆನ್ನೈನ ರೆಡ್ ಹಿಲ್ಸ್ ಪೊಲೀಸರು, ಈ ಪೈಕಿ ಕೆಲವರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!