fbpx

ನೆರೆಮನೆಯವನ ಜೊತೆ ಜಗಳವಾಡಲು ಹೋಗಿ ಮಹಡಿಯಿಂದ ಜಾರಿ ಕೆಳಕ್ಕೆ ಬಿದ್ದ ವ್ಯಕ್ತಿ! ಬೆಚ್ಚಿಬೀಳಿಸುವ ವಿಡಿಯೋ ನೋಡಿ

ಕೋಪದ ಕೈಗೆ ಹಿಡಿತಕೊಟ್ಟು ವ್ಯಕ್ತಿಯೊಬ್ಬ ಮೊದಲ‌ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದೋ ವಿಷಯಕ್ಕೆ ವ್ಯಕ್ತಿಯೊಬ್ಬ ಬಾಲ್ಕನಿಯಲ್ಲಿ ನಿಂತುಕೊಂಡು ಕೆಳಗಿದ್ದ ವ್ಯಕ್ತಿಯ ಜೊತೆ ಜಗಳವಾಡುತ್ತಿದ್ದ.

ಸಾಕಷ್ಟು ಮಾತಿನ ಚಕಮಕಿಯ ನಂತರ ಈಗ ಬರ್ತೇನೆ ತಡಿ ಎಂದು ಕೋಪದಿಂದ ಮನೆಯೊಳಗೆ ಹೋಗಿ ಕೆಲ ಪಾತ್ರೆಗಳನ್ನು ತಂದು ಕೆಳಗಿದ್ದ ವ್ಯಕ್ತಿಯ ಮೇಲೆ ಎಸೆದಿದ್ದಾನೆ. ಆದರೆ ಆ ವ್ಯಕ್ತಿಯ ಗ್ರಹಚಾರ ಕೆಟ್ಟಿತ್ತೇನೋ, ಪಾತ್ರೆಯನ್ನು ಎಸೆದ ಬೆನ್ನಿಗೇ ತಾನೂ ಆಯಾತಪ್ಪಿ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ.

ಈ ಘಟನೆ ಟರ್ಕಿಯಲ್ಲಿ ನಡೆದಿದ್ದು ಎಂದು ತಿಳಿದುಬಂದಿದ್ದು, ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ನೆರೆಹೊರೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ವ್ಯಕ್ತಿಯ ಅದೃಷ್ಟ ಕೈ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದೆಯಷ್ಟೆ.

ಇದನ್ನೂ ಓದಿ:  ಯೋಗಿ ಆದಿತ್ಯನಾಥ್ ಹತ್ಯೆಗೆ ಸಂಚು ರೂಪಿಸಿದ್ದವನ ಪರಿಸ್ಥಿತಿ ಏನಾಗಿದೆ ನೋಡಿ

ಆದರೆ ವಿಡಿಯೋ ನೋಡಿದವರು ಆತ ನಿಜವಾಗಿಯೂ ಬದುಕಿದ್ದಾನ ಎಂದು ಕಮೆಂಟ್ ಮಾಡಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!