fbpx

ಕಾರು ಓಡಿಸುತ್ತಲೇ ನಿದ್ದೆಗೆ ಜಾರಿದ ವ್ಯಕ್ತಿ ಬದುಕಿದ್ದೇ ಪವಾಡ! ವೈರಲ್ ವಿಡಿಯೋ ನೋಡಿ

ನಿದ್ದೆ ಮಂಪರಿನಲ್ಲಿ ಗಾಡಿಗಳನ್ನು ಓಡಿಸೋದು ತುಂಬಾ ಅಪಾಯಕಾರಿ. ಈ ರೀತಿ ಗಾಡಿ ಓಡಿಸಿ ಅದೆಷ್ಟೋ ಜನ ತಾವು ಸಾಯೋದಲ್ಲದೆ ಅಮಾಯಕ ಜನರನ್ನೂ ಬಲಿ ಪಡೆಯುತ್ತಾರೆ.

ಇದೀಗ ಇಂತಹದ್ದೇ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ನಿದ್ದೆ ಮಂಪರಿನಲ್ಲಿ ಗಾಡಿ ಓಡಿಸೋಕೆ ಹೋಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ಘಟನೆಯ ವಿಡಿಯೋ ಕಾರ್‌ನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ತಂದೆ-ಮಗ ರಜಾದಿನ ಕಳೆಯುವ ಸಲುವಾಗಿ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ರಾತ್ರಿಯಿಡೀ ಕಾರನ್ನು ಓಡಿಸಿದ ಮಗ ಬೆಳಗ್ಗೆ ತನ್ನ ತಂದೆಗೆ ಕಾರು ಓಡಿಸಲು ಬಿಟ್ಟು ಕೊಟ್ಟು ನಿದ್ದೆಗೆ ಜಾರಿದ್ದ.

ರಾತ್ರಿ ನಿದ್ದೆ ಸರಿಯಾಗಿರಲಿಲ್ಲವೇನೋ, ಕಾರಿನ ಡ್ರೈವರ್ ಸೀಟ್‌ನಲ್ಲಿ ಕೂತ ತಂದೆಗೂ ಕೇವಲ ಒಂದು ಗಂಟೆಯಲ್ಲೇ ನಿದ್ದೆ ಮಂಪರು ಆವರಿಸಲು ಶುರುವಾಗಿದೆ. ನಿದ್ದೆ ಮಂಪರಿನಲ್ಲೇ ಗಾಡಿ ಚಲಾಯಿಸುತ್ತಿದ್ದ ತಂದೆಯೂ ನೋಡನೋಡುತ್ತಲೇ ಗಾಢ ನಿದ್ರೆಗೆ ಜಾರಿದ್ದಾರೆ.

ಇದೇ ಸಂದರ್ಭದಲ್ಲೇ ಕಾರು ಲೇನ್ ದಾಟಿ ಪಕ್ಕದ ರಸ್ತೆಗೆ ಹೋಗಿದ್ದು ಎದುರಿನಿಂದ ಬರುತ್ತಿದ್ದ ಯಾವುದೋ ವಾಹನ ಕಾರಿನ ಸೈಡ್ ಮಿರರ್‌ಗೆ ಗುದ್ದಿಕೊಂಡು ಸಾಗಿದೆ. ಅಷ್ಟರಲ್ಲೇ ತಂದೆ-ಮಗ ಇಬ್ಬರೂ ಎಚ್ಚರಗೊಂಡಿದ್ದಾರೆ. ಕೂಡಲೇ ಮಗ ತಂದೆಯ ಮೇಲೆ ರೇಗಾಡಿ, ವಾಹನ ನಿಲ್ಲಿಸುವಂತೆ ಹೇಳಿದ್ದಾನೆ.

ಆದ್ರೆ ವಿಚಿತ್ರ ಏನಂದ್ರೆ ಆ ವ್ಯಕ್ತಿಯ ತಂದೆ ತನ್ನ ತಪ್ಪನ್ನು ಮರೆಮಾಚಿ ಎದುರುಗಡೆ ವಾಹನ ಚಾಲಕನ ಮೇಲೆ ಆರೋಪ ಹೊರಿಸಿದ್ದಾನೆ. ಆತನಿಂದಾಗಿಯೇ ಅಪಘಾತವಾಗಿದ್ದು ಎಂದು ಕೂಗಾಡಿದ್ದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ.

ಆದರೆ ಮಗನಿಗೆ ತಂದೆಯ ಮೇಲೆ ಅನುಮಾನ ಬಂದು ವಿಡಿಯೋ ಪರಿಶೀಲಿಸಿದಾಗ ತನ್ನ ತಂದೆ ನಿದ್ದೆ ಮಾಡಿ ಗಾಡಿ ಓಡಿಸಿರೋದು ಗೊತ್ತಾಗಿದೆ. ಒಂದು ವೇಳೆ ಯಾವುದಾದ್ರು ದೊಡ್ಡವಾಹನ ಕಾರಿಗೆ ಗುದ್ದಿದ್ದರೆ ಇಬ್ಬರೂ ಬದುಕುಳಿಯುತ್ತಿದ್ದುದೇ ಅನುಮಾನ. ಘಟನೆಯ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!