fbpx

ತಲೆಸುತ್ತು ಬಂದು ಕೆಳಕ್ಕೆ ಬಿದ್ರೂ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ! ಉಳಿಯಿತು 40ಜೀವಗಳು! ವೈರಲ್ ವಿಡಿಯೋ ನೋಡಿ

ಬಸ್ ಚಾಲಕನ ಸಮಯಪ್ರಜ್ಞೆ 40ಕ್ಕೂ ಹೆಚ್ಚು ಜನರ ಪ್ರಾಣ ಕಾಪಾಡಿದೆ. ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಬಿ.ಆರ್.ಟಿ.ಎಸ್ ಬಸ್‌ನಲ್ಲೇ ಈ ಘಟನೆ ನಡೆದಿದ್ದು, ಇದರ ದೃಶ್ಯಗಳು ಬಸ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ ಸಪ್ಟೆಂಬರ್ 5ರಂದು ಬಸ್ ನವನಗರ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಬಸ್ ಚಾಲಕನಿಗೆ ತಲೆಸುತ್ತು ಬಂದಿದೆ. ಆದರೂ ಸ್ವಲ್ಪ ದೂರದವರೆಗೆ ಬಸ್ ಚಾಲನೆ ಮಾಡಿದ ಚಾಲಕ ಕೊನೆಗೆ ತನ್ನಿಂದ ಸಾಧ್ಯವಾಗಲ್ಲ ಎಂದು ಅರಿವಾದ ಕೂಡಲೇ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾನೆ.

ಬಸ್ ನಿಂತ ಮರುಕ್ಷಣವೇ ಚಾಲಕ ಮೂರ್ಚೆ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಚಾಲಕ ಬಿದ್ದಿದ್ದೇ ತಡ ಮುಂದಿನ ಸೀಟ್‌ನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರು ಗಾಬರಿಯಿಂದ ಹಿಂದಕ್ಕೆ ಓಡಿ ಹೋಗಿದ್ದಾರೆ. ತಕ್ಷಣ ಹಿಂದಿನ ಸೀಟ್‌ನಲ್ಲಿದ್ದ ಪ್ರಯಾಣಿಕರು ಚಾಲಕನನ್ನು ಎಬ್ಬಿಸಿ ನೀರು ಕುಡಿಸಿ ಆರೈಕೆ ಮಾಡಿದ್ದಾರೆ.

ಇದನ್ನೂ ಓದಿ:  ಯೋಗಿ ಆದಿತ್ಯನಾಥ್ ಹತ್ಯೆಗೆ ಸಂಚು ರೂಪಿಸಿದ್ದವನ ಪರಿಸ್ಥಿತಿ ಏನಾಗಿದೆ ನೋಡಿ

ಒಂದು ವೇಳೆ ಬಸ್ ಚಾಲಕ ಸರಿಯಾದ ಸಮಯಕ್ಕೆ ಬಸ್ ನಿಲ್ಲಿಸದೇ ಹೋಗಿದ್ದರೆ ಬಸ್ ನವನಗರ ಬ್ರಿಡ್ಜ್‌ನಿಂದ ಕೆಳಕ್ಕೆ ಬಿದ್ದು ದೊಡ್ಡ ದುರಂತವೇ ಸಂಭವಿಸೋದರಲ್ಲಿತ್ತು. ಚಾಲಕನ ಸಮಯಪ್ರಜ್ಞೆ 40ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದೆ. ಘಟನೆಯ ಸಿಸಿಟಿವಿ ವಿಡಿಯೋ ನೋಡಿ,

Watch Video

video

Trending Short Videos

error: Content is protected !!