fbpx

ಒಬ್ಬಂಟಿಯಾಗಿ ಸಿಕ್ಕ ಸಿಂಹಿಣಿಯ ಮೇಲೆ ದಾಳಿ ಮಾಡಿದ ಕತ್ತೆಕಿರುಬಗಳ ಗುಂಪು, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ಹೈನಾಗಳು(ಕತ್ತೆಕಿರುಬ) ಅತ್ಯಂತ ಆಕ್ರಮಣಕಾರಿ ಮತ್ತು ಬುದ್ಧಿವಂತ ಜೀವಿಗಳು. ಇವು ಗುಂಪಿನಲ್ಲಿ ದಾಳಿ ಮಾಡುವ ಕಾರಣ ಏಕಾಂಗಿಯಾಗಿ ಸಿಕ್ಕರೆ ಸಿಂಹಗಳನ್ನು ಕೂಡ ಬೇಟೆಯಾಡಿ ಕೊಂದು ತಿನ್ನುತ್ತವೆ.

ಇದೀಗ ಇದೇ ಕತ್ತೆಕಿರುಬಗಳ ಬೇಟೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕತ್ತೆಕಿರುಬಗಳ ಗುಂಪು ಒಂಟಿಯಾಗಿ ಸಿಕ್ಕ ಸಿಂಹಿಣಿಯ ಮೇಲೆ ಆಕ್ರಮಣ ಮಾಡೋದನ್ನ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಏಕಾಏಕಿ 43 ಸೆಕೆಂಡುಗಳ ಉದ್ದದ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ(ಐಎಫ್‌ಎಸ್) ಸುಧಾ ರಾಮೆನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕತ್ತೆಕಿರುಬಗಳ ಗುಂಪು ಏಕಾಂಗಿಯಾಗಿ ಸಿಕ್ಕ ಸಿಂಹಿಣಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಕತ್ತೆಕಿರುಬಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಅಸಹಾಯಕ ಸಿಂಹಿಣಿ ಕಡೆಗೆ ಸಹಾಯಕ್ಕಾಗಿ ಕೂಗುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿದ್ದ ಸಿಂಹಗಳ ಗುಂಪು ಹೈನಾಗಳ ಮೇಲೆರಗಿ ಗಾಯಗೊಂಡ ಸಿಂಹಿಣಿಯನ್ನು ರಕ್ಷಿಸುತ್ತವೆ.

ಇದನ್ನೂ ಓದಿ:  ಅಪರೂಪದ ಎರಡು ತಲೆಯ ಹಾವು ಪತ್ತೆ, ವೈರಲ್ ವಿಡಿಯೋ ನೋಡಿ

ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು 30,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಸುಮಾರು 2,000 ಲೈಕ್‌ಗಳನ್ನು ಹೊಂದಿದೆ. ವೀಡಿಯೊ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಒಬ್ಬ’ಪ್ರಸ್ತುತ ಭಾರತದಲ್ಲಿ ಇಂತಹ ಸಂದೇಶಗಳು ಬಹಳ ಅಗತ್ಯ. ಜನರು ಜಾತಿ, ಧರ್ಮ, ಪ್ರದೇಶ ಇತ್ಯಾದಿಗಳಿಗಾಗಿ ಹೋರಾಡುತ್ತಿದ್ದಾರೆ. ಏಕತೆ ನಮ್ಮ ಶಕ್ತಿ. ಅದಕ್ಕಾಗಿಯೇ ಭಾರತ ಇಷ್ಟು ದೂರ ಬಂದಿದೆ ‘ಎಂದು ಕಮೆಂಟ್ ಮಾಡಿದ್ದಾನೆ.

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಪ್ರಾಣಿಗಳು ಅರ್ಥ ಮಾಡಿಕೊಂಡಿವೆ, ಆದರೆ ಮನುಷ್ಯ ಮಾತ್ರ ಇನ್ನೂ ಇದನ್ನು ಅರ್ಥ ಮಾಡಿಕೊಂಡಿಲ್ಲ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!