fbpx

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೇಗೆ ಡ್ರಗ್ಸ್ ಸಾಗಾಟ ಮಾಡ್ತಿದ್ರು ನೋಡಿ! ವೈರಲ್ ವಿಡಿಯೋ

ಮಾದಕ ವಸ್ತುಗಳನ್ನು ಕಳ್ಳ ಸಾಗಾಣೆ ಮಾಡಲು ಮದುವೆ ಆಮಂತ್ರಣ ಪತ್ರಿಕೆಯನ್ನು ಬಳಸಿಕೊಂಡ ವಿಡಿಯೋವೊಂದು ವೈರಲ್ ಆಗುತ್ತಿದೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಎಫೆಡ್ರಿನ್ ಎಂಬ ಕಚ್ಚಾವಸ್ತುವನ್ನು ಯಾರಿಗೂ ಗೊತ್ತಾಗದ ರೀತಿ ಮದುವೆ ಆಮಂತ್ರಣ ಪತ್ರಿಕೆಯೊಳಗೆ ತುಂಬಿ ಸಾಗಾಟ ಮಾಡಲು ಯತ್ನಿಸಲಾಗಿತ್ತು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ರಫ್ತು ಮಾಡಲು ಯತ್ನಿಸುವಾಗ ಕಸ್ಟಮ್ ಅಧಿಕಾರಿಗಳ ತಪಾಸಣೆಯ ಸಂದರ್ಭದಲ್ಲಿ ಸುಮಾರು ಐದು ಕೋಟಿ ಮೌಲ್ಯದ 5ಕೆಜಿ ಎಫೆಡ್ರಿನ್ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪತ್ತೆಯಾಗಿತ್ತು. ಕಳೆದ ಫೆಬ್ರವರಿಯಲ್ಲಿ ಪತ್ತೆಯಾದ ಈ ಪ್ರಕರಣದ ವಿಡಿಯೋ ಇದೀಗ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಹೊರಬರುತ್ತಿದ್ದಂತೆ ಮತ್ತೆ ವೈರಲ್ ಆಗುತ್ತಿದೆ.


Continue Reading

ಕಳೆದ ಫೆಬ್ರವರಿ 18ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾಗೆ ಕೊರಿಯರ್ ಮಾಡಲು ಬಂದಿದ್ದ ಪಾರ್ಸೆಲ್ ಒಂದರ ಬಗ್ಗೆ ಅನುಮಾನಗೊಂಡ ಕಸ್ಟಮ್ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದು ತೆರೆದು ನೋಡಿದ್ದಾರೆ. ಅದರಲ್ಲಿ 43 ಮದುವೆ ಆಮಂತ್ರಣ ಪತ್ರಿಕೆಗಳು ಕಂಡು ಬಂದಿತ್ತು. ಅದರಲ್ಲಿ ಒಂದನ್ನು ಕತ್ತರಿಸಿ ತೆರದು ನೋಡಿದಾಗ ಅದರೊಳಗೆ 60 ಗ್ರಾಂ ಎಫೆಡ್ರಿನ್ ಪುಡಿಯ ಎರಡು ಪ್ಯಾಕೆಟ್ ಪತ್ತೆಯಾಗಿದೆ.

ಇದನ್ನೂ ಓದಿ:  ಫೇಮಸ್ ಆಗಲು ಜೀವಂತ ಆಕ್ಟೋಪಸ್ ತಿನ್ನಲು ಹೋದ್ಲು, ಮುಂದಾಗಿದ್ದು ಮಾತ್ರ ಬೇರೇನೆ! ವೈರಲ್ ವಿಡಿಯೋ ನೋಡಿ

ಹೀಗೆ 43ಆಮಂತ್ರಣ ಪತ್ರಿಕೆಯಲ್ಲಿ ಐದು ಕೋಟಿ ಮೌಲ್ಯದ ಸುಮಾರು 5ಕೆಜಿ ಎಫೆಡ್ರಿನ್ ಪುಡಿ ಪತ್ತೆಯಾಗಿತ್ತು. ಇದಾದ ನಾಲ್ಕೇ ದಿನಕ್ಕೆ ಮತ್ತೆ ಇದೇ ರೀತಿ ಸಾಗಿಸಲಾಗುತ್ತಿದ್ದ 5ಕೆಜಿ ಎಫೆಡ್ರಿನ್ ಪುಡಿಯನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ತಮಿಳುನಾಡಿನ ಮದುರೈನಿಂದ ಆಸ್ಟ್ರೇಲಿಯಾದ ಸಿಡ್ನಿಗೆ ಈ ಪಾರ್ಸಲ್ ರವಾನಿಸಲಾಗುತ್ತಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅಬಕಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಫೆಬ್ರವರಿಯಲ್ಲಿ ನಡೆದ ಪ್ರಕರಣದ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಆಮಂತ್ರಣ ಪತ್ರಿಕೆಯಲ್ಲಿ ಯಾವರೀತಿ ಡ್ರಗ್ಸ್ ಸಾಗಿಸಲಾಗುತ್ತಿತ್ತು, ಇಲ್ಲಿದೆ ನೋಡಿ ವಿಡಿಯೋ,

Watch Video

Trending Short Videos

close

This will close in 26 seconds

error: Content is protected !!