fbpx

ರಸ್ತೆ ಪಕ್ಕ ಗೋಣಿ ಚೀಲದಲ್ಲಿತ್ತು ದೇಹ! ತೆರೆದು ನೋಡಿದ ಪೋಲಿಸರಿಗೆ ಶಾಕ್, ವೈರಲ್ ವಿಡಿಯೋ ನೋಡಿ

ಗೋಣಿ ಚೀಲಗಳಲ್ಲಿ, ಸೂಟ್ಕೇಸ್‌ಗಳಲ್ಲಿ ಮೃತದೇಹಗಳನ್ನು ತುಂಬಿ ಎಸೆದಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಾ ಇರುತ್ತೆ. ಇದೀಗ ಅಂತಹದ್ದೇ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆ ಪಕ್ಕದಲ್ಲಿದ್ದ ಅನಾಥವಾಗಿ ಬಿದ್ದಿದ್ದ ಗೋಣಿ ಮೂಟೆಯಿಂದಾಗಿ ಜನರು ಬೇಸ್ತುಬಿದ್ದ ಘಟನೆ ನಡೆದಿದೆ. ಯಾರನ್ನೋ ಗೋಣಿ ಚೀಲದಲ್ಲಿ ತುಂಬಿ ಎಸೆದಂತೆ ಕಾಣುತ್ತಿದ್ದ ಕಾರಣ ಜನರು ಶಾಕ್‌ಗೆ ಒಳಗಾಗಿದ್ದಾರೆ.


Continue Reading

ರಸ್ತೆಯಲ್ಲಿ ಓಡಾಡುತ್ತಿದ್ದ ಜನರಿಗೆ ಈ ಗೋಣಿ ಮೂಟೆ ಕಂಡಿದ್ದು, ಜನರ ದಂಡೇ ಸುತ್ತಮುತ್ತ ಸೇರಿದ್ದಾರೆ. ಕೊನೆಗೆ ಅವರಲ್ಲೊಬ್ಬರು ಹತ್ತಿರದ ಪೋಲೀಸ್ ಠಾಣೆಗೆ ಕರೆಮಾಡಿ ವಿಷಯ ಮುಟ್ಟಿಸಿದ್ದು, ತಕ್ಷಣ ಪೋಲೀಸರು ಆಂಬ್ಯುಲೆನ್ಸ್ ನೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ:  ಶ್ರೀ ರಾಯರು ಕೃಪೆಯಿಂದ ಈ ರಾಶಿಗಳಿಗೆ ಇಂದು, ಇಂದಿನ ನಿಮ್ಮ ರಾಶಿ ಭವಿಷ್ಯ

ಆದರೆ ಹತ್ತಿರ ಹೋಗಿ ಗೋಣಿ ಮೂಟೆ ತೆರೆದ ಪೋಲೀಸರು ಅದರಲ್ಲಿ ಇದ್ದ ಜೀವಂತ ವ್ಯಕ್ತಿಯನ್ನು ಕಂಡು ಶಾಕ್‌ಗೆ ಒಳಗಾಗಿದ್ದಾರೆ. ಸೊಳ್ಳೆಯ ಕಾಟದಿಂದ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಗೋಣಿ ಚೀಲವನ್ನು ಹೊದ್ದುಕೊಂಡು ಮಲಗಿದ್ದ.

ಪೋಲೀಸರು ಗೋಣಿ ಚೀಲ ತೆರೆಯುತ್ತಿದ್ದಂತೆ ಒಮ್ಮೆಗೆ ಎದ್ದುಕುಳಿತ ವ್ಯಕ್ತಿ ಸುತ್ತಮುತ್ತ ಜನರು ಸೇರಿರೋದನ್ನ ಕಂಡು ಹೌಹಾರಿ ಹೋಗಿದ್ದಾನೆ. ಕೊನೆಗೆ ತನ್ನ ಗೋಣಿ ಚೀಲದೊಂದಿಗೆ ಅಲ್ಲಿಂದ ತೆರಳಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ,

Watch Video

Trending Short Videos

close

This will close in 26 seconds

error: Content is protected !!