fbpx

Please assign a menu to the primary menu location under menu

ಕುಡಿದ ಅಮಲಿನಲ್ಲಿ ಅತಿಥಿಗಳ ಜೊತೆ ಕಾದಾಡಿದ ಮದುಮಗಳು, ವೈರಲ್ ವಿಡಿಯೋ ನೋಡಿ

ಮದುವೆಯ ಬಗ್ಗೆ ಅದೆಷ್ಟೋ ಜನ ನಮ್ಮ ಮದುವೆ ಹೀಗೆ ಆಗಬೇಕು ಹಾಗೆ ಆಗಬೇಕು ಎಂದು ಸಾವಿರಾರು ಕನಸುಗಳನ್ನು ಕಂಡಿರುತ್ತಾರೆ. ಯಾವುದೇ ವಿಘ್ನಗಳಿಲ್ಲದೆ ನಮ್ಮ ಮದುವೆ ನಡೆಯಲಪ್ಪ ಎಂದು ಅನೇಕರು ದೇವರಲ್ಲಿ ಹರಕೆಯನ್ನೂ ಹೊತ್ತುಕೊಳ್ಳುತ್ತಾರೆ.

ಆದರೆ ಇಲ್ಲೊಬ್ಬಳು ಮದುಮಗಳು ಮದುವೆ ದಿನವೇ ಅಥಿತಿಗಳ ಜೊತೆ ಕಾದಾಟಕ್ಕೆ ಇಳಿದಿದ್ದಾಳೆ. ಮದುವೆ ಉಡುಗೆಯಲ್ಲಿಯೇ ಮದುವೆಗೆ ಬಂದ ಅತಿಥಿಗಳ ಜೊತೆ ಜಗಳವಾಡಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ ಶುಕ್ರವಾರದಂದು ಇಂಗ್ಲೆಂಡ್‌ನ ಸೌಥ್ ವೇಲ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಮದುವೆ ಸಮಾರಂಭ ರಣರಂಗವಾಗಿ ಬದಲಾಗಿತ್ತು. ಕುಡಿದ ಅಮಲಿನಲ್ಲಿ ಮದುಮಗಳು ಹಾಗೂ ಅತಿಥಿಗಳ ಮದ್ಯೆ ಹೊಡೆದಾಟ ನಡೆದಿದೆ.

ಮದುವೆಗೆ ಬಂದಿದ್ದ ಅತಿಥಿಗಳನ್ನು ನೆಲಕ್ಕೆ ಕೆಡವಿದ ಮದುಮಗಳು ಅವರ ಮೇಲೆ ಕುಳಿತು ಚೆನ್ನಾಗಿ ಬಾರಿಸಿದ್ದಾಳೆ. ಅಲ್ಲಿದ್ದ ಇತರ ಅತಿಥಿಗಳು ಮದುಮಗಳನ್ನು ಎಷ್ಟೇ ಸಮಾಧಾನ ಪಡಿಸಿದ್ರೂ ಆಕೆ ಅವರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಹೇಗೋ ಆಕೆಯನ್ನು ಸಮಾಧಾನಪಡಿಸಿ ಗೆಳೆಯರು ಕರೆದುಕೊಂಡು ಹೋಗಿದ್ದಾರೆ.

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಲಕ್ಷಾಂತರ ಮಂದಿ ವಿಡಿಯೋವನ್ನು ನೋಡಿದ್ದಾರೆ. ಮದುವೆಗೆ ಬಂದ ಅತಿಥಿಗಳು ಕೆಟ್ಟದಾಗಿ ವರ್ತಿಸಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ಯುವತಿ ದಾಳಿ ಮಾಡಿದ್ದು ಎಂದು ತಿಳಿದುಬಂದಿದೆ. ವೈರಲ್ ವಿಡಿಯೋ ನೋಡಿ,

Watch Video

video
error: Content is protected !!