fbpx

ಕುಡಿದು ತೂರಾಡುತ್ತಾ ರೈಲ್ವೇ ಹಳಿ ದಾಟಲು ಹೋಗಿ ದಾರುಣವಾಗಿ ಸತ್ತ ವ್ಯಕ್ತಿ! (ವೈರಲ್ ವಿಡಿಯೋ)

ರೈಲ್ವೇ ಹಳಿ ದಾಟಲು ಹೋಗಿ ವ್ಯಕ್ತಿಯೊಬ್ಬ ದಾರುಣವಾಗಿ ಸಾವಿಗೀಡಾದ ವಿಡಿಯೋ ವೈರಲ್ ಆಗಿದೆ. ಹರ್ಯಾಣದ ಫರೀದಾಬಾದ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಸಿಕ್ಕಿ ವ್ಯಕ್ತಿ ಮೃತಪಟ್ಟಿದ್ದಾನೆ.

ಪ್ಲಾಟ್‌ಫಾರಂ ಮೇಲಿದ್ದ ಜನ ಈ ಘಟನೆಯ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲು ಬರುವ ಬಗ್ಗೆ ಸಿಗ್ನಲ್ ಹಾಕಿದ್ದರೂ ಹಲವರು ರೈಲ್ವೇ ಹಳಿಯ ಮೂಲಕ ಕ್ರಾಸಿಂಗ್ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ಸಂದರ್ಭದಲ್ಲಿ ಕುಡುಕನೊಬ್ಬ ರೈಲ್ವೇ ಹಳಿ ದಾಟಲು ಯತ್ನಿಸಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಪ್ಲಾಟ್‌ಫಾರಂ ಮೇಲಿದ್ದ ಜನ ಎಷ್ಟೇ ಎಚ್ಚರಿಸಿದ್ರೂ ಕುಡುಕ ರೈಲ್ವೇ ಹಳಿಯನ್ನು ದಾಟುತ್ತಾ ಮುಂದಕ್ಕೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಬಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಕುಡುಕನಿಗೆ ಬಡಿದಿದ್ದು, ಡಿಕ್ಕಿಯ ರಭಸಕ್ಕೆ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಬಹುತೇಕೆ ಎಲ್ಲಾ ರೈಲ್ವೇ ಸ್ಟೇಷನ್‌ಗಳಲ್ಲೂ ಹಳಿದಾಟಲು ಬ್ರಿಡ್ಜ್‌ಗಳು ಇದ್ರೂ ಜನ ಕೆಲ ನಿಮಿಷಗಳ ಉಳಿತಾಯಕ್ಕೆ ರೈಲ್ವೇ ಹಳಿಯ ಮೂಲಕವೇ ದಾಟಲು ಯತ್ನಿಸುತ್ತಾರೆ. ಪ್ರತಿ ವರ್ಷ ಇದೇ ರೀತಿ ಹಳಿ ದಾಟಲು ಹೋಗಿ ನೂರಾರು ಜನ ದಾರುಣವಾಗಿ ಸಾವನ್ನಪ್ಪುತ್ತಾರೆ. ಇಷ್ಟೆಲ್ಲಾ ಆದರೂ ಜನರಿಗೆ ಬುದ್ದಿ ಬರೋದಿಲ್ಲ.

Watch Video

video

error: Content is protected !!