fbpx

ಒಂಟಿ ಮಹಿಳೆಯನ್ನು ಕಳ್ಳನಿಂದ ರಕ್ಷಿಸಿದ ಬೀದಿ ನಾಯಿ, ವೈರಲ್ ವಿಡಿಯೋ ನೋಡಿ

ನಾಯಿಗಳು ನಿಯತ್ತಿಗೆ ಹೆಸರಾಗಿರುವ ಪ್ರಾಣಿಗಳು. ನಾವು ಹಾಕಿದ ಅನ್ನದ ಋಣ ಯಾವತ್ತಿಗೂ ಮರೆಯೋಲ್ಲ. ಇದೀಗ ಬೀದಿ ನಾಯಿಯೊಂದರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಳ್ಳನೊಬ್ಬ ದಾಳಿ ಮಾಡಿದ್ದಾನೆ. ಮಹಿಳೆಯನ್ನು ನೆಲಕ್ಕೆ ಕೆಡವಿ ಪರ್ಸ್ ಕದ್ದು ಓಡಬೇಕು ಎನ್ನುವಷ್ಟರಲ್ಲಿ ಅಲ್ಲೇ ಇದ್ದ ಬೀದಿ ನಾಯಿಯೊಂದು ಕಳ್ಳನ ಮೇಲೆ ಅಟ್ಯಾಕ್ ಮಾಡಿದೆ.

ಕಳ್ಳನ ದಾಳಿಗೆ ಮಹಿಳೆ ನೆಲಕ್ಕೆ ಬಿದ್ದಿದ್ದಾಳೆ, ಕಳ್ಳ ಇನ್ನೇನು ಮಹಿಳೆಯ ಪರ್ಸ್ ಎಳೆಯಬೇಕು ಎನ್ನುವಷ್ಟರಲ್ಲಿ ನಾಯಿ ಆತನ ಮೇಲೆ ಎಗರಿ ಕಚ್ಚಿದೆ. ನಾಯಿ ದಾಳಿಯನ್ನು ಊಹಿಸಿರದ ಕಳ್ಳ ಪರ್ಸ್ ಬಿಟ್ಟು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಆದರೆ ಬೀದಿನಾಯಿ ಆತನನ್ನು ಬೆಂಬಿಡದೆ ಅಟ್ಟಾಡಿಸಿದೆ.

ಇದನ್ನೂ ಓದಿ:  ಮಥುರೆಯ ಕೃಷ್ಣ ಜನ್ಮ ಭೂಮಿಯಲ್ಲಿರುವ ಅಕ್ರಮ ಮಸೀದಿ ತೆರವಿಗೆ ಕೋರ್ಟ್‌ನಲ್ಲಿ ದಾವೆ! ಇಲ್ಲಿದೆ‌ ಡಿಟೈಲ್ಸ್

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ನಾಯಿಯ ನಿಯತ್ತಿಗೆ ಸಲಾಂ ಎಂದಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!