fbpx

ಸಾಧಾರಣ ಕಳ್ಳರಿಂದ ಈ ಕಾರು ಕದಿಯಲು ಸಾಧ್ಯವಿಲ್ಲ, ಹಾಗಿದೆ ಈ ವ್ಯಕ್ತಿ ಕಾರು ಪಾರ್ಕ್ ಮಾಡಿದ ಜಾಗ! ವೈರಲ್ ವಿಡಿಯೋ ನೋಡಿ

ವ್ಯಕ್ತಿಯೊಬ್ಬನ ಪಾರ್ಕಿಂಗ್ ಸ್ಕಿಲ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿ ತನ್ನ ಇನ್ನೋವ ಕಾರನ್ನು ಕಾಲುವೆಯ ಮೇಲಿನ ಕಾಂಕ್ರಿಟ್ ಸ್ಲಾಬ್ ಮೇಲೆ ನಿಲ್ಲಿಸಿರೋದನ್ನ ಕಾಣಬಹುದಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಕೇರಳದ ವಯನಾಡ್ ಜಿಲ್ಲೆಯ ಪೆರಿಯ ಅಲಾಟ್ ನಿವಾಸಿ ಪಿಜೆ ಬಿಜು ಎಂದು ಗುರುತಿಸಲಾಗಿದೆ. ಓಣಂ ಪ್ರಯುಕ್ತ ತನ್ನ ಗೆಳೆಯನ ಇನ್ನೋವ ಕಾರಿನ ಜೊತೆ ಊರಿಗೆ ಬಂದಿದ್ದ ಬಿಜು ಕಾರು ನಿಲ್ಲಿಸಲು ಮನೆಯ ಮುಂಭಾಗ ಜಾಗವಿಲ್ಲದ ಕಾರಣ ಅಪಾಯಕಾರಿ ಜಾಗದಲ್ಲಿ ಪಾರ್ಕ್ ಮಾಡಲು ಮುಂದಾಗಿದ್ದಾರೆ.

ಗಂಡ ಕಾರನ್ನು ಪಾರ್ಕ್ ಮಾಡೋ ದೃಶ್ಯವನ್ನು ಪತ್ನಿ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ನಟ ಡಾನಿಶ್ ಸೇಟ್ ಕೂಡ ವೈರಲ್ ವಿಡಿಯೋವನ್ನು ಶೇರ್ ಮಾಡಿ ವ್ಯಕ್ತಿಯ ಡ್ರೈವಿಂಗ್ ಸ್ಕಿಲ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!