fbpx

Please assign a menu to the primary menu location under menu

ನಡು ರಸ್ತೆಯಲ್ಲಿಯೇ ತಾಯಿ-ಮಗಳ ಮೇಲೆ ‘ಮಚ್ಚು’ ಬೀಸಿದ ದುಷ್ಕರ್ಮಿಗಳು, ಶಾಕಿಂಗ್ ವಿಡಿಯೋ ನೋಡಿ

ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿಯೇ ತಾಯಿ-ಮಗಳ ಮೇಲೆ ಮಚ್ಚಿನಿಂದ ದಾಳಿ ಮಾಡಿ ಹತ್ಯೆಗೈಯಲು ಯತ್ನಿಸಿದ ಘಟನೆ ನಡೆದಿದೆ. ವಿದ್ಯಾಪೀಠ ರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ತಾಯಿ-ಮಗಳನ್ನು ಅಡ್ಡಹಾಕಿ ಹತ್ಯೆ ಮಾಡಲು ಯತ್ನಿಸಿದ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಾಯಿ-ಮಗಳು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಹಾಕಿ ಮಚ್ಚಿನಿಂದ ದಾಳಿ ನಡೆಸಿದ್ದಾರೆ. ಮೊದಲು ತಾಯಿ ದೀಪಾ ಶ್ರೀಕುಮಾರ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ತಡೆಯಲು ಹೋದ ಮಗಳು ಹಿಷಿತಾ ಮೇಲೂ ಮಚ್ಚು ಬೀಸಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರೂ ರಕ್ಷಣೆಗಾಗಿ ಕೂಗಿಕೊಂಡಿದ್ದು, ಸಾರ್ವಜನಿಕರು ಸೇರುತ್ತಿದ್ದಂತೆ ದುಷ್ಕರ್ಮಿಗಳು ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದಾರೆ. ಸೆಪ್ಟೆಂಬರ್ 4ರಂದು ಸಂಜೆ 7:40ರ ಸುಮಾರಿಗೆ ಈ ಘಟನೆ ನಡೆದಿದ್ದು, ಗಾಯಗೊಂಡ ತಾಯಿ-ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿಗೊಳಗಾದ ದೀಪಾ ಅವರು ಅವರು ಆಸ್ಟಿನ್ ಸ್ಕೂಲ್ ಸಂಸ್ಥಾಪಕ ಶ್ರೀಕುಮಾರ್ ಅವರ ಎರಡನೇ ಪತ್ನಿ ಎಂದು ತಿಳಿದುಬಂದಿದ್ದು, ಇವರಿಬ್ಬರ ನಡುವೆ ಇರೋ ಆಸ್ತಿ ವಿವಾದವೇ ದಾಳಿಗೆ ಕಾರಣವೆಂದು ಹೇಳಲಾಗುತ್ತಿದೆ. ಆಸ್ತಿ ವಿವಾದದ ಕುರಿತು ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ.

ಇದೇ ಕಾರಣಕ್ಕೆ ಪತಿ ಶ್ರೀಕುಮಾರ್, ಅವರ ಪುತ್ರ ಜಯಂತ್, ಪುತ್ರಿ ಮೋನಿಷಾ ಮತ್ತು ಅಳಿಯ ನವೀನ್ ಅವರೇ ಸೇರಿಕೊಂಡು ದೀಪಾ ಮತ್ತು ಹಿಷಿತಾ ಹತ್ಯೆಗೆ ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ನಡೆದು ನಾಲ್ಕು ದಿನವಾದರೂ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಸಿಸಿ ಕ್ಯಾಮರಾ ದೃಶ್ಯ ಇಲ್ಲಿದೆ ನೋಡಿ,

Watch Video

video
error: Content is protected !!