fbpx

ಬೆಂಕಿಯಿಂದ‌ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಜಿಗಿದ ಮಕ್ಕಳು, ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂರು ಹಾಗೂ ಹತ್ತು ವರ್ಷದ ಇಬ್ಬರು ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಇಬ್ಬರು ಮಕ್ಕಳು ಮನೆಯಿಂದ ಹೊರಬರಲಾಗದೆ ಒದ್ದಾಡಿದ್ದಾರೆ.

ಮನೆಯಿಂದ ಹೊಗೆ ಹೊರಬರುತ್ತಿರೋದನ್ನ ಗಮನಿಸಿದ ನೆರೆಹೊರೆಯವರು ಓಡಿ ಬಂದು ಮನೆಯ ಬಾಗಿಲು ತೆರೆಯಲು ಯತ್ನಿಸಿದ್ರೂ ಅದು ಸಾಧ್ಯವಾಗಿಲ್ಲ. ಸಮಯ ಕಳೆದಂತೆ ಮನೆಯಲ್ಲಿ ಬೆಂಕಿ ಕೆನ್ನಾಲಿಗೆ ಹೆಚ್ಚಾಗುತ್ತಾ ಹೋಗಿದೆ. ರಕ್ಷಣಾ ತಂಡ ಬರುವವರೆಗೆ ಕಾಯುವಷ್ಟು ಸಮಯ ಅಲ್ಲಿರಲಿಲ್ಲ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಕೊನೆಗೆ ಅಲ್ಲಿ ನೆರೆದಿದ್ದ ಜನರು ಇಬ್ಬರು ಮಕ್ಕಳಲ್ಲಿ ಕಿಟಕಿ ಬಾಗಿಲು ತೆರೆದು ಹೊರಗೆ ಜಿಗಿಯುವಂತೆ ಹೇಳಿದ್ದಾರೆ. ಮೊದಲಿಗೆ ಮೂರು ವರ್ಷದ ಮಗು ಕಟ್ಟಡದಿಂದ ಜಿಗಿದಿದ್ದು, ನಂತರ ಹತ್ತು ವರ್ಷದ ಬಾಲಕ ಕಟ್ಟಡದಿಂದ ಹೊರಕ್ಕೆ ಜಿಗಿದಿದ್ದಾನೆ.

ಕೆಳಗಿದ್ದ ಜನ ಇಬ್ಬರನ್ನೂ ಸುರಕ್ಷಿತವಾಗಿ ಹಿಡಿದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರೂ ಕೂಡ ಚಿಕಿತ್ಸೆ ಪಡೆದಿದ್ದಾರೆ.

ಫ್ರಾನ್ಸ್‌ನ ಗ್ರೀನೋಬಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ತಮ್ಮ ಪ್ರಾಣ ಪಣಕ್ಕಿಟ್ಟು ಮಕ್ಕಳ ರಕ್ಷಣೆ ಮಾಡಿದವರಿಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!