fbpx

ಏಕಾಏಕಿ ಮುರಿದುಬಿತ್ತು ಕೊಂಬೆ, ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಾಜಿ ಯೋಧನ ಸಾವು! ಜವರಾಯನ ಅಟ್ಟಹಾಸದ ವಿಡಿಯೋ ನೋಡಿ

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮರದ ಕೊಂಬೆ ತುಂಡಾಗಿ ಬಿದ್ದು ಮಾಜಿ ಯೋಧರೊಬ್ಬರು ಮೃತರಾದ ಘಟನೆ ಸೋಮವಾರ ನಡೆದಿದೆ. ಘಟನೆಯ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಬೆಚ್ಚಿಬೀಳಿಸುವಂತಿದೆ.

ಮಂಡ್ಯ ನಿವಾಸಿಯಾಗಿರುವ ಮಾಜಿ ಯೋಧ ಆರ್.ಎಲ್.ಪಟೇಲ್ ಸ್ನೇಹಿತನೊಡನೆ ಸಕಲೇಶಪುರ ಪಟ್ಟಣಕ್ಕೆ ಆಗಮಿಸಿದ್ದು, ಅಲ್ಲೇ ಅಂಗಡಿಯೊಂದರಲ್ಲಿ ಕಾಫಿಪುಡಿ ಖರೀದಿಸಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದರು. ಇದೇ ಸಂದರ್ಭದಲ್ಲಿ ಮರದ ಕೊಂಬೆ ತುಂಡಾಗಿ ಇಬ್ಬರ ಮೇಲೆಯೂ ಬಿದ್ದುಬಿಟ್ಟಿದೆ.


Continue Reading

img 20200907 wa00261477662497404405937

ಸ್ನೇಹಿತ ಕೂಡಲೇ ಎದ್ದು ನಿಂತರೂ, ಆರ್‌.ಎಲ್.ಪಟೇಲ್ ಅವರ ತಲೆಯ ಮೇಲೆ ಮರದ ದೊಡ್ಡ ಗೆಲ್ಲು ಬಡಿದ ಕಾರಣ ಅವರು ಗಂಭೀರ ಗಾಯಗಳೊಂದಿಗೆ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು ಓಡಿ ಬಂದು ಕೊಂಬೆಗಳನ್ನು ಸರಿಸಿದ್ದಾರೆ.

ಇದನ್ನೂ ಓದಿ:  ನೋಡನೋಡುತ್ತಿದ್ದಂತೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು ಲಾರಿ, ವೈರಲ್ ವಿಡಿಯೋ ನೋಡಿ

ಗಂಭೀರ ಗಾಯಗೊಂಡು ಸಾವುಬದುಕಿನ ನಡುವೆ ಒದ್ದಾಡುತ್ತಿದ್ದ ಪಟೇಲ್‌ರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಬದುಕಿಸಲಾಗಲಿಲ್ಲ. ಮೃತರಿಗೆ 35ವರ್ಷ ವಯಸ್ಸಾಗಿತ್ತು.

ಘಟನೆಯ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಯೋಧನ ಮೇಲೆ ಜವರಾಯ ಯಾವರೀತಿ ಅಟ್ಟಹಾಸ ಮೆರೆದಿದ್ದಾನೆ ನೋಡಿ ಈ ವಿಡಿಯೋ,

Watch Video

Trending Short Videos

close

This will close in 26 seconds

error: Content is protected !!