fbpx

ಕುಡಿದ ಮತ್ತಿನಲ್ಲಿ ಗೂಳಿಯ ಜೊತೆ ಕಾದಾಟಕ್ಕಿಳಿದ ವ್ಯಕ್ತಿ, ವೈರಲ್ ವಿಡಿಯೋ ನೋಡಿ

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಗೂಳಿಯ‌ ಜೊತೆ ಕಾಳಗಕ್ಕಿಳಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಅಲ್ಲಿದ್ದ ಜನರನ್ನು ಆತಂಕಗೊಳಿಸುವ ಜೊತೆಗೆ ಮನರಂಜನೆಯನ್ನು ಸಹ ನೀಡಿದೆ.

ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾದಲ್ಲಿಯೂ ಇದೇ ರೀತಿ ಗೂಳಿ ಕಾಳಗವಿದ್ದು, ಇದನ್ನು ನೋಡಿ ಈ ವ್ಯಕ್ತಿ ಪ್ರಭಾವಿತನಾಗಿದ್ದನೋ ಏನೋ ರಸ್ತೆಯಲ್ಲಿ ತೆರಳುತ್ತಿದ್ದ ಗೂಳಿಯ ಕೊಂಬನ್ನು ಹಿಡಿದು ಕಾದಾಟಕ್ಕೆ ಇಳಿದಿದ್ದಾನೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಬೇರೆ ಗೂಳಿಯಾಗಿದ್ದರೆ ವ್ಯಕ್ತಿಯನ್ನು ತುಳಿದು ಹಣ್ಣುಗಾಯಿ ನೀರುಗಾಯಿ ಮಾಡ್ತಾ ಇತ್ತೇನೋ, ಈ ಗೂಳಿ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ತೋರಿಲ್ಲ. ವ್ಯಕ್ತಿ ಕೊನೆಗೂ ಗೂಳಿಯನ್ನು ನೆಲಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಮಾಯಕ ಪ್ರಾಣಿಯ ಮೇಲೆ ಹಿಂಸಾತ್ಮಕವಾಗಿ ವರ್ತಿಸಿದ ವ್ಯಕ್ತಿಯ ಬಗ್ಗೆ ಅನೇಕರು ಕಿಡಿಕಾರಿದ್ದಾರೆ. ಇನ್ನು ಕೆಲವರು ವ್ಯಕ್ತಿಯನ್ನು ಬಾಹುಬಲಿ ಸಿನಿಮಾದ ಬಲ್ಲಾಳದೇವನಿಗೆ ಹೋಲಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.

Watch Video

video

error: Content is protected !!