fbpx

ಇನ್ನೇನು ಮೆಟ್ಟಿಲಿನಿಂದ ಕೆಳಕ್ಕೆ ಬೀಳಲಿದ್ದ ಮಗುವನ್ನು ದೇವರಂತೆ ಬಂದು ಕಾಪಾಡಿದ ಬೆಕ್ಕು, ವೈರಲ್ ವಿಡಿಯೋ ನೋಡಿ

ಪುಟ್ಟ ಕಂದಮ್ಮಗಳ ಮೇಲೆ ಎಷ್ಟೇ ಎಚ್ಚರವಹಿಸಿದರೂ ಸಾಲದು. ಸ್ವಲ್ಪ ಗಮನ ಅತ್ತಿತ್ತ ಸರಿದ್ರೂ ಮಕ್ಕಳ ಜೀವಕ್ಕೇ ಸಂಚಕಾರ ಬರಬಹುದು. ನಿನ್ನೆಯಷ್ಟೇ ರಿಮೋಟ್ ಬ್ಯಾಟರಿ ನುಂಗಿ ಪುಟ್ಟ ಮಗು ಸಾವಿಗೀಡಾದ ಬಗ್ಗೆ ಸುದ್ದಿವಾಹಿನಿಗಳಲ್ಲಿ ಪ್ರಕಟವಾಗಿದ್ದು ಇದಕ್ಕೆ ತಾಜಾ ಉದಾಹರಣೆ.

ಇದೇ ರೀತಿಯ ಘಟನೆಯೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೇನು ತೆವಳುತ್ತಾ ಬಂದು ಮೆಟ್ಟಿಲಿನಿಂದ ಕೆಳಕ್ಕೆ ಬೀಳಲಿದ್ದ ಪುಟ್ಟ ಮಗುವಿನ ಜೀವವನ್ನು ಸಾಕು ಬೆಕ್ಕೊಂದು ಕಾಪಾಡಿದೆ.


Continue Reading

img 20200907 wa00157392225742744142035

ಕಾಂಬೋಡಿಯಾದ ಬೊಗೋಟ ಎಂಬಲ್ಲಿ ಈ ಘಟನೆ ನಡೆದಿದ್ದು, ಒಂದು ವರ್ಷದ ಪುಟ್ಟ ಮಗುವನ್ನು ಹಾಲ್‌ನಲ್ಲಿ ಆಟವಾಡಲು ಬಿಟ್ಟು ತಾಯಿ ಬೇರೆ ಕೆಲಸದಲ್ಲಿ ಬ್ಯುಸಿ ಆಗಿದ್ದಳು. ಪುಟ್ಟ ಮಗು ಆಟವಾಡುತ್ತಾ ಮೆಟ್ಟಿಲುಗಳತ್ತ ಬಂದಿದೆ, ಇದನ್ನು ಅಲ್ಲೇ ಸೋಫ ಮೇಲೆ ಕೂತಿದ್ದ ಸಾಕು ಬೆಕ್ಕು ಗಮನಿಸುತ್ತಿತ್ತು.

ಇದನ್ನೂ ಓದಿ:  ಶ್ರೀ ರಾಯರು ಕೃಪೆಯಿಂದ ಈ ರಾಶಿಗಳಿಗೆ ಇಂದು, ಇಂದಿನ ನಿಮ್ಮ ರಾಶಿ ಭವಿಷ್ಯ

ಇನ್ನೇನು ಮಗು ಮೆಟ್ಟಿಲುಗಳ ತುದಿಗೆ ಬಂದು ಕೆಳಕ್ಕೆ ಬೀಳಬೇಕು ಅನ್ನುವಷ್ಟರಲ್ಲಿ ಬೆಕ್ಕು ಅಲ್ಲಿಗೆ ಓಡಿಬಂದು ಮಗುವಿನ ಬಟ್ಟೆ ಹಿಡಿದು ಹಿಂದಕ್ಕೆ ಎಳೆದಿದೆ. ಅಲ್ಲದೆ ಮೆಟ್ಟಿಲುಗಳಿಗೆ ಅಡ್ಡಲಾಗಿ ನಿಂತು ಮಗುವನ್ನು ಹಿಂದಿರುಗುವಂತೆ ಮಾಡಿದೆ.

ಈ ಎಲ್ಲಾ ದೃಶ್ಯಗಳು ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಕ್ಕಿನ ಬುದ್ದಿವಂತಿಕೆಗೆ ಜನ ಶಭಾಷ್ ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!