fbpx

ಸಾಲ ವಸೂಲಿಗೆ ಬಂದ ಬ್ಯಾಂಕ್ ಸಿಬ್ಬಂದಿಯ ಮೇಲೆ ರೇಪ್ ಕೇಸ್ ಹಾಕ್ತಾಳಂತೆ, ಮಹಿಳೆಯ ರಂಪಾಟದ ವಿಡಿಯೋ ನೋಡಿ

ಪಡೆದ ಸಾಲ ಮರುಪಾವತಿಸದ್ದಕ್ಕೆ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆಯೊಬ್ಬಳು ನಿಂದಿಸಿ, ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯ ಪತಿ ಬ್ಯಾಂಕ್‌ನಿಂದ ಸಾಲ ಪಡೆದು ಇಎಮ್‌ಐ ಕಟ್ಟದ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿ ಮಹಿಳೆಯ ಪತಿಯನ್ನು ಹುಡುಕಿಕೊಂಡು ಬಂದಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಪತಿಯೊಂದಿಗೆ ಮಾತನಾಡುತ್ತಿದ್ದಂತೆ ಮಹಿಳೆಯೂ ಹೊರಗೆ ಬಂದು ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾಳೆ. ನಿಮ್ಮ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ವಿಡಿಯೋ ಮಾಡಿಸಿದ್ದಾಳೆ.


Continue Reading

img 20200907 wa0003178999009407778523

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಿಮ್ಮ ಮರ್ಯಾದಿ ಕಳೀತೀನಿ, ನಿಮ್ಮ ಮೇಲೆ ರೇಪ್ ಕೇಸ್ ಹಾಕ್ತೇನೆ ಎಂದಿದ್ದೂ ಅಲ್ದೆ ಅವಾಚ್ಯ ಪದಗಳಿಂದ ಬ್ಯಾಂಕ್ ಸಿಬ್ಬಂದಿಯನ್ನು ನಿಂದಿಸಿದ್ದಾಳೆ. ಹಿರಿಯ ನಾಗರೀಕರು ಎಂದು ನೋಡದೆ ರೇಗಾಡಿದ್ದಾಳೆ.

ಇದನ್ನೂ ಓದಿ:  ಮನುಷ್ಯರನ್ನೇ ಮೀರಿಸುವಂತೆ ಸಿಗರೇಟ್ ಎಳೆದ ಏಡಿ, ವೈರಲ್ ವಿಡಿಯೋ ನೋಡಿ

ಈ ವೇಳೆ ಸಿಬ್ಬಂದಿಯೋರ್ವರು ಮಹಿಳೆಯ ಕಾಲಿಗೆ ಬಿದ್ದು ಕೂಗಾಡದಂತೆ ಕೇಳಿಕೊಂಡ್ರೂ ಮಹಿಳೆ ದರ್ಪ ಮುಂದುವರಿಸಿದ್ದಾಳೆ. ತೆಗೆದುಕೊಂಡ ಸಾಲ ಕಟ್ಟದಿದ್ರೂ ಮೂರು ಬಿಟ್ಟವರಂತೆ ವರ್ತಿಸಿದ ಮಹಿಳೆಗೆ ನೆಟ್ಟಗರು ಛೀಮಾರಿ ಹಾಕುತ್ತಿದ್ದಾರೆ. ಆಕೆಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

Trending Short Videos

close

This will close in 26 seconds

error: Content is protected !!