fbpx

ಸೆಕ್ಯುರಿಟಿ ಗಾರ್ಡ್ ಜೊತೆ ಶಕ್ತಿ ಪ್ರದರ್ಶನಕ್ಕೆ ಇಳಿದು ಹಿಗ್ಗಾಮುಗ್ಗಾ ಜಾಡಿಸಿಕೊಂಡ ಯುವಕ, ವೈರಲ್ ವಿಡಿಯೋ ನೋಡಿ

ಹಗಲು ರಾತ್ರಿ ನಿದ್ದೆ ಬಿಟ್ಟು ಕೆಲಸ ಮಾಡುವ ಬಡ ಸೆಕ್ಯುರಿಟಿ ಗಾರ್ಡ್‌ಗಳ ಮೇಲೆ ಸಣ್ಣಪುಟ್ಟ ವಿಷಯಕ್ಕೆ ಹಲ್ಲೆ ಮಾಡುವ ವಿಡಿಯೋಗಳು ಆಗಾಗ ವೈರಲ್ ಆಗ್ತಾ ಇರುತ್ತೆ. ಇದೀಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಪಾರ್ಟ್‌ಮೆಂಟ್ ಒಂದಕ್ಕೆ ಪ್ರವೇಶಿಸಲು ಯತ್ನಿಸಿದ ಅಪರಿಚಿತ ಯುವಕನನ್ನು ತಡೆದಿದ್ದಕ್ಕೆ, ಆತ ಸೆಕ್ಯುರಿಟಿ ಗಾರ್ಡ್ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಗೆಳೆಯನನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ತಡೆದು ಸೆಕ್ಯುರಿಟಿಗಾರ್ಡ್ ಆತನಲ್ಲಿ ದಾಖಲೆಗಳನ್ನು ಕೇಳಿದ್ದಾನೆ.


Continue Reading

picsart 09 06 092148757598461031983

ಇಷ್ಟಕ್ಕೆ ಕೋಪ ನೆತ್ತಿಗೇರಿಸಿಕೊಂಡ ಯುವಕ ಸೆಕ್ಯುರಿಟಿಗಾರ್ಡ್ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ವಿಡಿಯೋದಲ್ಲಿರುವ ಯುವಕ ಮಾರ್ಷಲ್ ಆರ್ಟಿಸ್ಟ್ ಆಗಿದ್ದು, ತನ್ನ ಶಕ್ತಿಯನ್ನು ಬಡ ಸೆಕ್ಯುರಿಟಿಗಾರ್ಡ್ ಮೇಲೆ ಪ್ರದರ್ಶಿಸಲು ಮುಂದಾಗಿದ್ದಾನೆ.

ಇದನ್ನೂ ಓದಿ:  ಶ್ರೀ ರಾಯರು ಕೃಪೆಯಿಂದ ಈ ರಾಶಿಗಳಿಗೆ ಇಂದು, ಇಂದಿನ ನಿಮ್ಮ ರಾಶಿ ಭವಿಷ್ಯ

ಸೆಕ್ಯುರಿಟಿಗಾರ್ಡ್‌ಗೆ ಕಾಲಿನಿಂದ ಹಲ್ಲೆ ನಡೆಸಿದ ಯುವಕ, ಆತನನ್ನು ನೆಲಕ್ಕೆ ಕೆಡವಿದ್ದಾನೆ. ಅಲ್ಲದೆ ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಷ್ಟರಲ್ಲೆ ಅಲ್ಲಿಗೆ ಬಂದ ಇತರ ಸೆಕ್ಯುರಿಟಿಗಾರ್ಡ್‌ಗಳು ಯುವಕನಿಗೆ ಹಿಗ್ಗಾಮುಗ್ಗಾ ಭಾರಿಸಿದ್ದಾರೆ.

ತಮ್ಮ ಕೈಲಿದ್ದ ಲಾಠಿಯಿಂದ ಯುವಕನ ಬೆಂಡೆತ್ತಿದ್ದಲ್ಲದೆ ಆತನನ್ನು ಹಗ್ಗದಿಂದ ಕಟ್ಟಿ ಅಪಾರ್ಟ್‌ಮೆಂಟ್ ಹೊರಕ್ಕೆ ತೆಗೆದುಕೊಡು ಹೋಗಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!