fbpx

ಆಟವಾಡುತ್ತಾ ವಿಷಕಾರಿ ಹಾವನ್ನೇ ನುಂಗಿದ ಮಗು, ಮುಂದೇನಾಯಿತು ನೋಡಿ! ಶಾಕಿಂಗ್ ನ್ಯೂಸ್

ಪುಟ್ಟ ಮಕ್ಕಳ ಮೇಲೆ ಹೆತ್ತವರ ಗಮನ ಎಷ್ಟಿದ್ದರೂ ಸಾಲದು, ಸ್ವಲ್ಪ ಯಾಮಾರಿದ್ರೂ ಮಕ್ಕಳ ಪ್ರಾಣವೇ ಹೋಗುವ ಪ್ರಸಂಗ ಎದುರಾಗಬಹುದು. ಅಂತಹದ್ದೇ ಘಟನೆಯೊಂದು ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಫತೇಗಂಜ್ನ ಬೋಲಾಪುರಗ್ರಾಮದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಒಂದು ವರ್ಷದ ಮಗು ನೆಲದಲ್ಲಿದ್ದ ಯಾವುದೋ ವಸ್ತುವನ್ನು ಬಾಯಿಯೊಳಕ್ಕೆ ಹಾಕಿಕೊಂಡಿದೆ. ಇದನ್ನು ಗಮನಿಸಿದ ತಾಯಿ ಓಡಿ ಬಂದು ಮಗುವಿನ ಬಾಯಿ ತೆರೆದು ನೋಡಿದಾಗ ವಿಷಕಾರಿ ಹಾವಿನ ಮರಿ ಪತ್ತೆಯಾಗಿದೆ.


Continue Reading

img 20200906 wa00123549978954745681113

ಕೂಡಲೇ ಮಗುವಿನ ಬಾಯಿಯೊಳಕ್ಕೆ ಕೈಹಾಕಿ ಗಂಟಲೊಳಗೆ ಹೊಕ್ಕಿದ್ದ ಹಾವಿನ ಮರಿಯನ್ನು ಹೊರಗೆಳೆದಿದ್ದಾಳೆ. ಅಷ್ಟರಲ್ಲಾಗಲೇ ಹಾವಿನ ಮರಿ ಸತ್ತುಹೋಗಿತ್ತು. ತಕ್ಷಣ ಮಗುವಿನ ತಂದೆ ಮಗುವಿನೊಂದಿಗೆ ಆಸ್ಪತ್ರೆಗೆ ಧಾವಿಸಿದ್ದು, ಪರೀಕ್ಷೆ ನಡೆಸಿದ ವೈದ್ಯರು, ವಿಷ ನಿವಾರಿಸುವ ಇಂಜೆಕ್ಷನ್ ನೀಡಿದ್ದಾರೆ.

ಇದನ್ನೂ ಓದಿ:  ಮನೆ ದೋಚಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್! ವೈರಲ್ ವಿಡಿಯೋ ನೋಡಿ

ಮಗು ನುಂಗಿದ್ದ ಹಾವಿನ ಮರಿ ವಿಷಕಾರಿ ಕ್ರೈಟ್ ಜಾತಿಗೆ ಸೇರಿದ ಹಾವಾಗಿದ್ದು, ತಾಯಿ ತಕ್ಷಣ ಎಚ್ಚೆತ್ತು ಅದನ್ನು ಮಗುವಿನ ಬಾಯಿಯಿಂದ ಹೊರಗೆಳೆದ ಕಾರಣ ಮಗು ಅಪಾಯದಿಂದ ಪಾರಾಗಿದೆ. ಹಾವು ಸುಮಾರು ಆರು ಅಂಗುಲ ಉದ್ದವಿತ್ತು ಎಂದು ತಿಳಿದುಬಂದಿದೆ.

Trending Short Videos

close

This will close in 26 seconds

error: Content is protected !!