fbpx

Please assign a menu to the primary menu location under menu

ಕೋಚಿಂಗ್ ಸೆಂಟರ್ ಹೆಸರಿನಲ್ಲಿ ಈ ಕಾಮುಕ ಶಿಕ್ಷಕ ಮಾಡುತ್ತಿದ್ದುದೇನು ಗೊತ್ತೇ? ವೈರಲ್ ವಿಡಿಯೋ ನೋಡಿ

ಮದರಸದಲ್ಲಿ ಇಸ್ಲಾಮಿಕ್ ಶಿಕ್ಷಣದ ಹೆಸರಿನಲ್ಲಿ ಬಾಲಕಿಯರ ಮೇಲೆ ಶಿಕ್ಷಕನೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಟಿಜನ್‌ಗಳು ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ.

ಮಹಿಳಾ ವಿದ್ಯಾರ್ಥಿನಿಯರಿಗೆ ಇಸ್ಲಾಮಿಕ್ ಶಿಕ್ಷಣ ಬಗ್ಗೆ ಕೋಚಿಂಗ್ ಕೊಡುವ ನೆಪದಲ್ಲಿ ಶಿಕ್ಷಕನೋರ್ವ ಕೋಣೆಯೊಂದನ್ನು ಬಾಡಿಗೆಗೆ ಪಡೆದು ತರಬೇತಿ ಕೇಂದ್ರವನ್ನು ತೆರಿದಿದ್ದ. ಆದರೆ ಆತ ಕೋಚಿಂಗ್ ಕೊಡುವ ಬದಲು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಬಗ್ಗೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಘಟನೆ ಬಾಂಗ್ಲಾದೇಶದ ಉಜಿರ್‌ಪುರ ಎಂಬಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಉಜಿರ್‌ಪುರದ ಸೋನಾರ್ ಬಾಂಗ್ಲಾ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ನೂರುಲ್ ಹಕ್ ಸರ್ದಾರ್‌ ಎಂಬಾತನೆ ಕಾಮುಕ ಶಿಕ್ಷಕ. ಈ ಘಟನೆ 2016ದಲ್ಲಿ ನಡೆದಿದ್ದು, ಇದೀಗ ಮತ್ತೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

2016ರಲ್ಲಿ ಶಿಕ್ಷಣ ಸಚಿವಾಲಯದಿಂದ ಘಟನೆಯ ತನಿಖೆ ನಡೆಸಿದ ನಂತರ, ಶಿಕ್ಷಣ ಸಚಿವಾಲಯವು ಆರೋಪಿ‌ ಶಿಕ್ಷಕನನ್ನು ಶಾಲೆಯಿಂದ ಹೊರಹಾಕಿತ್ತು, ಆದರೆ ಇದೀಗ ಮತ್ತೆ ಆತನನ್ನು ಅದೇ ಶಾಲೆಗೆ ಶಿಕ್ಷಕನಾಗಿ ಸೇರಿಸಿರೋದೆ ವಿಡಿಯೋ ಮತ್ತೊಮ್ಮೆ ವೈರಲ್ ಆಗಲು ಕಾರಣವೆಂದು ತಿಳಿದುಬಂದಿದೆ.

Watch Video

video
error: Content is protected !!