fbpx

ಪೆಟ್ರೋಲ್ ಸುರಿದು ವ್ಯಕ್ತಿಯನ್ನು ಜೀವಂತ ಸುಟ್ಟು ಕೊಂದ ಕಿರಾತಕ, ಭೀಕರ ಹತ್ಯೆಯ ಸಿಸಿಟಿವಿ ದೃಶ್ಯ ವೈರಲ್

ಹಾಸನದಲ್ಲಿ ನಡೆದ ಭೀಕರ ಹ’ತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಕುಡಿದು ಬಾರ್ ಮುಂದೆ ಮಲಗಿದ್ದ ರಮೇಶ್ ಎಂಬಾತನನ್ನು ಪೆಟ್ರೋಲ್‌ ಸುರಿದು ಜೀವಂತ ದಹಿಸಿ ಕೊ’ಲೆ ಮಾಡಲಾಗಿತ್ತು.

ಆಗಸ್ಟ್ 9ನೇ ತಾರೀಖಿನಂದು ಈ ಭೀಕರ ಹ’ತ್ಯೆ ನಡೆದಿತ್ತು, ಇದೀಗ ಕೊಲೆಗಡುಕ ಆರೋಪಿಯನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ಬಾರ್ ನೊಳಗೆ ಆರೋಪಿ ಹಾಗೂ ರಮೇಶ್ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಹ’ತ್ಯೆ ನಡೆದಿದೆ.

ಹೊಳೆನರಸೀಪುರದ ರೌಡಿ ಶೀಟರ್ ಮಹೆಬೂಬ್ ಖಾನ್ ಹಾಗೂ ರಮೇಶ್ ನಡುವೆ ಬಾರ್‌ನಲ್ಲಿ ಸಣ್ಣ ವಿಷಯಕ್ಕೆ ಗಲಾಟೆ ನಡೆದಿತ್ತು. ಇದೇ ವೈಷಮ್ಯದಿಂದ ಆರೋಪಿ ಕುಡಿದು ಬಾರ್ ಮುಂದೆ ಮಲಗಿದ್ದ ರಮೇಶ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಆಗಸ್ಟ್ 9ರ ರಾತ್ರಿ ಈ ಕೃತ್ಯ ನಡೆದಿದ್ದು, ತೀವ್ರ ಸುಟ್ಟ ಗಾಯದಿಂದ ಆಸ್ಪತ್ರೆಗೆ ಸೇರಿದ್ದ ರಮೇಶ್ ಅಗಸ್ಟ್22 ರಂದು ಮೃತಪಟ್ಟಿದ್ದರು. ಮೊದಲಿಗೆ ಮೃತನ ಪತ್ನಿ ಆಸ್ತಿಗಾಗಿ ತನ್ನ ಗಂಡನ ಕಡೆಯವರು
ಹ’ತ್ಯೆ ಮಾಡಿದ್ದಾರೆಂದು ದೂರುಕೊಟ್ಟಿದ್ದಳು. ಈ ಬಗ್ಗೆ ತನಿಖೆಗಿಳಿದ ಪೊಲೀಸರಿಗೆ 25 ದಿನಗಳ ನಂತರ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಬಾರ್‌ನಲ್ಲಿ ನಡೆದ ಸಣ್ಣ ಗಲಾಟೆಯನ್ನೇ ನೆಪವಾಗಿ ಇಟ್ಟುಕೊಂಡು ಆರೋಪಿ ಮೆಹಬೂಬ್ ಖಾನ್ ಬಾರ್ ಮುಂದೆ ಮಲಗಿದ್ದ ರಮೇಶ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹ’ತ್ಯೆಗೈದಿದ್ದ. ದುರುಳ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ದೃಶ್ಯ ಆಧರಿಸಿ ಹ’ತ್ಯೆ ಆರೋಪಿಯನ್ನು ಪೊಲೀಸ್ ತಂಡ ಸೆರೆಹಿಡಿದಿದೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ,

Watch Video

error: Content is protected !!