fbpx

22ಸಾವಿರ ಅಡಿ ಎತ್ತರದಲ್ಲಿರುವ ಶಿಖರದ ಮೇಲೆ ನಿಂತು ಕನ್ನಡಿಗ ವೀರ ಯೋಧ ನೀಡಿದ ಸಂದೇಶವೇನು ಗೊತ್ತೇ! ಮೈ ಜುಂ ಎನ್ನಿಸುವ ವಿಡಿಯೋ ನೋಡಿ

ತಾಯಿ ನಾಡಿಗಾಗಿ ವೀರ ಯೋಧರು ಬಿಸಿಲು, ಮಳೆ, ಚಳಿ, ಬೆಟ್ಟ, ಕಣೆವೆ ಎನ್ನದೆ ರಕ್ಷಣೆ ಮಾಡುತ್ತಾರೆ. ಅದೆಷ್ಟೋ ಯೋಧರು ಭಾರತ ಮಾತೆಯ ರಕ್ಷಣೆ ಮಾಡುತ್ತಾ ಹುತಾತ್ಮರಾಗಿದ್ದಾರೆ. ಇದೀಗ ದೇಶದ ಗಡಿ ಕಾಯುತ್ತಿರುವ ಭಾರತ ಮಾತೆಯ ಸುಪುತ್ರ, ಕನ್ನಡಿಗ ವೀರ ಯೋಧರೊಬ್ಬರ ವಿಡಿಯೋವೊಂದು ಸಖತ್ ವೈರಲ್ ಆಗಿದೆ.

ಭಾರತ-ಪಾಕ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಸೋಮವಾರಪೇಟೆಯ ನಿವಾಸಿಯಾಗಿರುವ ವೀರ ಯೋಧರೊಬ್ಬರು ಮಾಡಿದ ವಿಡಿಯೋ ಇದಾಗಿದೆ. ಸಮುದ್ರ ಮಟ್ಟದಿಂದ 22ಸಾವಿರ ಅಡಿ ಎತ್ತರದಲ್ಲಿ ಇರುವ ಕಣಿವೆ ಪ್ರದೇಶವೊ‌ಂದರಲ್ಲಿ ನಿಂತು ವಿಡಿಯೋ ಮಾಡಿರುವ ಯೋಧ, ಆ ಸ್ಥಳದ ಬಗ್ಗೆ ವಿವರಣೆ ನೀಡಿದ್ದಾರೆ.

ಬಾಂಬ್ ಪತ್ತೆದಳದ ಮುಖ್ಯಸ್ಥನಾಗಿ ಕರ್ತವ್ಯ ಮಾಡುತ್ತಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಣಿವೆ ಪ್ರದೇಶ ಪಾಕಿಸ್ತಾನದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದಿದ್ದಾರೆ. ಒಂದು ಕಡೆ ಆಳವಾದ ಕಣಿವೆ, ಇನ್ನೊಂದು ಕಡೆ ಪಾಕಿಸ್ತಾನ ಹೀಗೆ ಆ ಸ್ಥಳದ ಭಯಾನಕತೆಯ ಬಗ್ಗೆ ತಿಳಿಸುವಾಗ ವಿಡಿಯೋ ನೋಡಿದವರ ಮೈ ಜುಂ ಎನ್ನದೆ ಇರದು.

ಈ ಹಿಂದೆ ಇದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಭಾರತೀಯ ಯೋಧರು ಆಯತಪ್ಪಿ ಪಾಕಿಸ್ತಾನದ ಗಡಿಯಾಚೆ ಕಣಿವೆಗೆ ಉರುಳಿಬಿದ್ದು ಹುತಾತ್ಮರಾಗಿದ್ದರು. ಅವರ ಮೃತದೇಹ ತೆಗೆಯೋಕು ಪಾಪಿ ಪಾಕಿಗಳು ಬಿಟ್ಟಿರಲಿಲ್ಲ ಎಂದಿದ್ದಾರೆ.

ಇಂತಹ ಕಠಿಣ ಪ್ರದೇಶಕ್ಕೆ ನಾನು ತೆರಳುತ್ತಿದ್ದು, ಜೀವಂತವಾಗಿ ಮರಳುತ್ತೇನೋ, ಇಲ್ಲವೋ ತಿಳಿದಿಲ್ಲ. ಆದರೆ ನಿಮ್ಮ ಆಶೀರ್ವಾದ ಮತ್ತು ಪ್ರಾರ್ಥನೆ ಇದ್ದರೆ ಖಂಡಿತವಾಗಿಯೂ ಸುರಕ್ಷಿತವಾಗಿ ಮರಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!