fbpx

ಈ ಐನಾತಿ ಕಳ್ಳಿಯರ ಕೈಚಳಕ ಹೇಗಿದೆ ನೋಡಿ (ವೈರಲ್ ವಿಡಿಯೋ)

ನಾವು ಕಳ್ಳರ ಕೈಚಳಕದ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೇವೆ. ಇದೀಗ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆಯರ ತಂಡವೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿ ದಿನಬಳಕೆ ವಸ್ತುಗಳನ್ನು ಕಳ್ಳತನ ಮಾಡಿರುವ ವಿಡಿಯೋ ಇದಾಗಿದೆ‌. ಸೂಪರ್ ಮಾರ್ಕೆಟ್‌ಗೆ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರು ಶ್ಯಾಂಪೂ, ಸಾಬೂನುಗಳನ್ನು ತಮ್ಮ ಬಟ್ಟೆಯೊಳಕ್ಕೆ ತುರುಕಿ ಕಳ್ಳತನ ಮಾಡಿದ್ದಾರೆ.

ಸಾಚಾಗಳಂತೆ ಸೂಪರ್ ಮಾರ್ಕೆಟ್‌ಗೆ ಬಂದ ಕಳ್ಳಿಯರ ತಂಡ ಬಹಳ ವ್ಯವಸ್ಥಿತವಾಗಿ ಕಳ್ಳತ‌ನ ಮಾಡಿದೆ. ಕಳ್ಳಿಯರಲ್ಲಿ ಒಬ್ಬಾಕೆ ವಸ್ತುಗಳನ್ನು ತನ್ನ ಬಟ್ಟೆಯೊಳಕ್ಕೆ ತುರುಕಿಸುತ್ತಿದ್ದರೆ ಉಳಿದವರು ಸುತ್ತಮುತ್ತಲು ಕಾವಲಿಗೆ ನಿಂತಿರುತ್ತಿದ್ದರು.

ಹೀಗೆ ಎಲ್ಲರೂ ಒಬ್ಬೊಬ್ಬರಾಗಿ ಕೈಗೆ ಸಿಕ್ಕ ವಸ್ತುಗಳನ್ನು ಬಟ್ಟೆಯ ಒಳಗೆ ತುಂಬಿಸಿಕೊಂಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸೂಪರ್ ಮಾರ್ಕೆಟ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ಈ ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿರೋದು ಎಂದು ತಿಳಿದುಬಂದಿದ್ದು, ಸೂಪರ್ ಮಾರ್ಕೆಟ್ ಮಾಲೀಕರು ಸಿಸಿಟಿವಿ ದೃಶ್ಯಗಳ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳಿಯರ ಮುಖಚಹರೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಬಂಧನಕ್ಕೆ ಸಹಕಾರಿಯಾಗಲಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!