fbpx

Please assign a menu to the primary menu location under menu

ತನ್ನ ಪ್ರಾಣ ಪಣಕ್ಕಿಟ್ಟು ಉರುಳಿಗೆ ಬಿದ್ದಿದ್ದ ತೋಳವನ್ನು ರಕ್ಷಿಸಿದ ವ್ಯಕ್ತಿ, ಸಖತ್ ವೈರಲ್ ಆಗುತ್ತಿರುವ ವಿಡಿಯೋ ನೋಡಿ

ಇತರರ ಪ್ರಾಣವನ್ನು ರಕ್ಷಿಸಲು ತಮ್ಮ ಜೀವವನ್ನು ಅಪಾಯಕ್ಕೆ ತಳ್ಳುವ ಜನರನ್ನು ನಾವು ಬಹಳ ವಿರಳವಾಗಿ ಕಾಣುತ್ತೇವೆ. ಆದರೆ ಅಂತಹದ್ದೇ ಒಂದು ನಿದರ್ಶನವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಪಣಕ್ಕಿಟ್ಟು ತೋಳವನ್ನು ಉಳಿಸಲು ಪ್ರಯತ್ನಿಸುತ್ತಿರುವ ವೀಡಿಯೊ ಇದಾಗಿದೆ.

ಯಾರೋ ಬೇಟೆಗಾರರು ಹಾಕಿದ ಕಬ್ಬಿಣದ ಉರುಳಿಗೆ(trap) ತೋಳವೊಂದರ ಮುಂಭಾಗದ ಕಾಲುಗಳು ಸಿಕ್ಕಿಬಿದ್ದಿದ್ದರಿಂದ ಅದು ಅದರಿಂದ ತಪ್ಪಿಸಿಕೊಳ್ಳಲಾಗದೆ ನೋವಿನಿಂದ ನರಳುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿ ತನ್ನ ಪ್ರಾಣಕ್ಕೆ ಸಂಚಕಾರವಿದ್ದರೂ, ತೋಳವನ್ನು ಉರುಳಿನಿಂದ ರಕ್ಷಿಸಿದ್ದಾನೆ.

ಉರುಳನ್ನು ತೋಳದ ಕಾಲಿನಿಂದ ಬಿಡಿಸೋದು ಸುಲಭವಾಗಿರಲಿಲ್ಲ. ವ್ಯಕ್ತಿ ತೋಳದ ಹತ್ತಿರ ಹೋಗುತ್ತಿದ್ದಂತೆ ಅದು ಆತನ ಮೇಲೆ ದಾಳಿ ಮಾಡಲೋ ಅಥವಾ ಹೆದರಿಕೆಯಿಂದಲೋ ಅತ್ತಿತ್ತ ಹೊರಳಾಡಿದೆ. ಆದರೆ ಆ ವ್ಯಕ್ತಿ ತನ್ನಲ್ಲಿದ್ದ ಕಬ್ಬಣದ ರಾಡ್ ಸಹಾಯದಿಂದ ತೋಳವನ್ನು ಅಲುಗಾಡದಂತೆ ಹಿಡಿದು ಅದರ ಕಾಲಿಗೆ ಸಿಕ್ಕಿಬಿದ್ದಿದ್ದ ಕಬ್ಬಿಣದ ಉರುಳನ್ನು ಬಿಡಿಸಿದ್ದಾನೆ.

ಉರುಳಿನಿಂದ ಬಿಡುಗಡೆಯಾದ ತೋಳ ಆತನ ಮೇಲೆ ಆಕ್ರಮಣ ಮಾಡುವ ಅಪಾಯವಿತ್ತು. ಇದಕ್ಕೆ ವ್ಯಕ್ತಿ ತೋಳವನ್ನು ಮುಕ್ತಿ ಗೊಳಿಸಿದ ಬೆನ್ನಲ್ಲೇ ಅಲ್ಲಿದ ದೂರ ಓಡಿಹೋಡಿ ಹೋಗಿದ್ದಾನೆ. ಆತನ ಅದೃಷ್ಟಕ್ಕೋ ಅಥವಾ ಉರುಳಿನಿಂದ ಬಿಡಿಸಿದ ಕೃತಜ್ಞತೆಗೋ ತೋಳ ಆತನ ಮೇಲೆ ದಾಳಿ ಮಾಡದೆ ಕಾಡಿನೊಳಕ್ಕೆ ಓಡಿಹೋಗಿದೆ. ವಿಡಿಯೋ ಇಲ್ಲಿದೆ ನೋಡಿ

Watch Video

video
error: Content is protected !!