fbpx

ಸೆಕೆ ಅಂತ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದು ರೆಕ್ಕೆಯ ಮೇಲೆ ಓಡಾಡಿದ ಮಹಿಳೆ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ವಿಪರೀತ ಸೆಕೆ ಆಗ್ತಿದೆಯೆಂದು ಮಹಿಳೆಯೊಬ್ಬರು ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆದು ರೆಕ್ಕೆಯ ಮೇಲೆ ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ತೆರೆಯಬಹುದಾದ ಬಾಗಿಲನ್ನು ಮಹಿಳೆ ಸೆಕೆಯ ಕಾರಣ ನೀಡಿ ತೆರೆದಿದ್ದಾಳೆ.

ಮಹಿಳೆ ವಿಮಾನದಲ್ಲಿ ಟರ್ಕಿಯ ಅಂತಾಲ್ಯ ಎಂಬಲ್ಲಿಂದ ಉಕ್ರೇನ್‌ಗೆ ಪ್ರಯಾಣ ಬೆಳೆಸಿದ್ದಳು. ಉಕ್ರೇನ್‌ನ ಕೀವ್‌ನಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ಅತಿಯಾದ ಬಿಸಿಲಿನಿಂದಾಗಿ ವಿಮಾನದಲ್ಲಿ ಸೆಕೆಯ ವಾತಾವರಣ ಸೃಷ್ಟಿಯಾಗಿದೆ. ಎಲ್ಲರೂ ಸೆಕೆಯನ್ನು ಸಹಿಸಿಕೊಂಡು ಸುಮ್ಮನೆ ಕೂತಿದ್ದರೆ, ಈ ಮಹಿಳೆ ಮಾತ್ರ ಸೆಕೆ ಎಂದು ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದಿದ್ದಾಳೆ.


Continue Reading

img 20200905 wa00094667697634366370593

ಎಮರ್ಜೆನ್ಸಿ ಬಾಗಿಲಿನ ಮೂಲಕ ಹೊರಬಂದ ಮಹಿಳೆ ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾಳೆ. ಇದನ್ನು ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಏರ್ಪೋರ್ಟ್ ಸಿಬ್ಬಂದಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಉಕ್ರೇನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಸಹ ಈ ಘಟನೆಯನ್ನು ದೃಢಪಡಿಸಿದೆ.

ಇದನ್ನೂ ಓದಿ:  ಮಾಸ್ಕ್ ಬದಲಿಗೆ ಜೀವಂತ ಹೆಬ್ಬಾವನ್ನೇ ಮುಖಕ್ಕೆ ಸುತ್ತಿಕೊಂಡ ವ್ಯಕ್ತಿ! ವೈರಲ್ ವಿಡಿಯೋ ನೋಡಿ

ಸದ್ಯ ಮಹಿಳೆಯನ್ನು ಉಕ್ರೇನ್‌ನ ವಿಮಾನಯಾನ ಕಂಪನಿಗಳು ಕಪ್ಪುಪಟ್ಟಿಗೆ ಸೇರಿಸಿದ್ದು, ಇಂತಹ ಕಾನೂನುಬಾಹಿರ ಅಪಾಯಕಾರಿ ಕೆಲಸಗಳನ್ನು ಮಾಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos


close

This will close in 26 seconds

error: Content is protected !!