fbpx

ಅಡ್ಡಾದಿಡ್ಡಿ ಸ್ಕೂಟಿ ಚಲಾಯಿಸಿ ಪ್ರಾಣವನ್ನೇ ಕಳೆದುಕೊಂಡ ಮಹಿಳೆ, ವೈರಲ್ ವಿಡಿಯೋ ನೋಡಿ

ಅಡ್ಡಾದಿಡ್ಡಿ ವಾಹನ ಚಲಾಯಿಸಿ ವರ್ಷಂಪ್ರತಿ ಅದೆಷ್ಟೋ ರಸ್ತೆ ಅಪಘಾತಗಳು ಸಂಭವಿಸುತ್ತವೆ, ಇಂತಹ ಅನೇಕ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಇದೀಗ ಇಂತಹದ್ದೇ ರಸ್ತೆ ಅಪಘಾತದ ವಿಡಿಯೋವೊಂದು ವೈರಲ್ ಆಗಿದೆ.

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಸ್ಕೂಟಿಯನ್ನು, ಸಂಚಾರಿ ದಟ್ಟಣೆಯಿದ್ದ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸಲು ಹೋಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಕುಶಾಯಿಗುಡ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 35ವರ್ಷದ ಸರಿತಾ ಎಂದು ಗುರಿತಿಸಲಾಗಿದೆ.


Continue Reading

img 20200904 wa00477974238347261934347

ತುಂಬಾ ಸಂಚಾರಿ ದಟ್ಟಣೆಯಿದ್ದ ರಸ್ತೆಯಲ್ಲಿ ಮಹಿಳೆ ತಮ್ಮ ಸ್ಕೂಟಿಯನ್ನು ಮನಬಂದಂತೆ ಚಲಾಯಿಸಿದ್ದಾರೆ. ಲಾರಿಯ ಪಕ್ಕದಲ್ಲಿ ಚಲಿಸುತ್ತಿದ್ದ ತನ್ನ ಸ್ಕೂಟಿಯನ್ನು ಏಕಾಏಕಿ ಲಾರಿಯ ಮುಂಭಾಗಕ್ಕೆ ತಂದ ಪರಿಣಾಮ, ಲಾರಿಗೆ ಸಿಲುಕಿ ಸ್ಕೂಟಿ ಮಗುಚಿ ಬಿದ್ದಿದೆ.

ಇದನ್ನೂ ಓದಿ:  ಹಾವನ್ನು ಚಾಣಾಕ್ಷತನದಿಂದ ಬೇಟೆಯಾಡಿ ತಿನ್ನೋ ಮೀನು! ವೈರಲ್ ವಿಡಿಯೋ ನೋಡಿ

ಈ ಸಂದರ್ಭದಲ್ಲಿ ಮಹಿಳೆ ತನ್ನ ಬಲಭಾಗಕ್ಕೆ ಬಿದ್ದಿದ್ದು, ಲಾರಿಯ ಚಕ್ರ ಮಹಿಳೆಯ ತಲೆಯ ಮೇಲೆ ಸಂಚರಿಸಿದೆ. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಈ ಘಟನೆ 2019ರ ನವೆಂಬರ್‌ನಲ್ಲಿ ಸಂಭವಿಸಿದ್ದು, ಭೀಕರ ಅಪಘಾತದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

Trending Short Videos

close

This will close in 26 seconds

error: Content is protected !!