fbpx

ಚೀನಾದ ಸೊಕ್ಕು ಮುರಿಯಲು ಲಡಾಖ್ ಗಡಿಗೆ ಹೊರಟ ಭಾರತೀಯ ಯೋಧರನ್ನು ಹುರಿದುಂಬಿಸಿದ ಟಿಬೆಟಿಯನ್ನರು, ವೈರಲ್ ವಿಡಿಯೋ ನೋಡಿ

ಸೈನಿಕರನ್ನು ಕಂಡರೆ ಕಲ್ಲು ತೂರಾಡುವ ಕಣಿವೆ ರಾಜ್ಯ ಒಂದೆಡೆಯಾದರೆ, ದೇಶ ರಕ್ಷಣೆಗೆ ಹೊರಟಿರುವ ಸೈನಿಕರನ್ನು ಹುರಿದುಂಬಿಸುವ ಟಿಬೇಟಿನ ಜನ ಇನ್ನೊಂದೆಡೆ, ಈ ದೃಶ್ಯ ಕಂಡುಬಂದದ್ದು ಟಿಬೆಟ್ ಹಾಗೂ ಭಾರತದ ಗಡಿ ಭಾಗದಲ್ಲಿ.

ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ಘರ್ಷಣೆ ಸ್ವಲ್ಪಮಟ್ಟಿಗೆ ತಾರಕಕ್ಕೇರುವ ಹಾಗೆ ಕಂಡು ಬರುತ್ತಿದೆ. ದಿನಕ್ಕೊಂದರಂತೆ ಕಳ್ಳನಾಟ ಆಡುತ್ತಿರುವ ಚೀನಾದ ಸೊಕ್ಕು ಮುರಿಯಲು ಪಣತೊಟ್ಟಿರುವ ಭಾರತೀಯ ಸೇನೆ ಒಂದಡೆಯಾದರೆ, ಭಾರತ ರಕ್ಷಣೆಗೆ ಹೊರಟಿರುವ ಭಾರತೀಯ ಸೈನಿಕರನ್ನು ಹುರಿದುಂಬಿಸುವ ಜನರು ಇನ್ನೊಂದೆಡೆ.

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಟಿಬೆಟ್ ಸಮುದಾಯದ ಜನ ಲಡಾಖ್ ಗಡಿಗೆ ತೆರಳುತ್ತಿದ್ದ ಸೇನಾ ವಾಹನಗಳಿಗೆ ಜಯಕಾರ ಕೂಗಿ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿಬೆಟ್ ಹಾಗೂ ಭಾರತದ ಗಡಿ ಗಡಿಭಾಗದಲ್ಲಿ ಸೈನಿಕರನ್ನು ಹುರಿದುಂಬಿಸುವ ವಿಡಿಯೋ ಇದೀಗ ವೈರಲ್ ಆಗಿದೆ. ಭಾರತ ಮತ್ತು ಟಿಬೇಟಿನ ಸ್ನೇಹ ಹೀಗೆ ಶಾಶ್ವತವಾಗಿರಲಿ ಎಂಬ ಜಯಘೋಷ ಮೊಳಗಿಸಿದ್ದಾರೆ. ವಿಡಿಯೋ ಇಲ್ಲಿದೆ‌ ನೋಡಿ,

Watch Video

error: Content is protected !!