fbpx

Please assign a menu to the primary menu location under menu

ಚೀನಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ತೈವಾನ್, ವೈರಲ್ ವಿಡಿಯೋ ನೋಡಿ

ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಕಾಲುಕೆರೆದುಕೊಂಡು ಜಗಳಕ್ಕೆ ಹೋಗುವ ಚೀನಾಗೆ ತೈವಾನ್ ಎಂಬ ಪುಟ್ಟ ರಾಷ್ಟ್ರ ತಕ್ಕ ಪಾಠ ಕಲಿಸಿದೆ‌. ತನ್ನ ವಾಯುಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ ಚೀನಾ ವಾಯುಸೇನೆಯ ಸುಖೋಯ್-35 ಯುದ್ಧ ವಿಮಾನವನ್ನು ತೈವಾನ್ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ ಬಗ್ಗೆ ವರದಿಯಾಗಿದೆ.

ರಷ್ಯಾ ನಿರ್ಮಿತ ಸುಖೋಯ್-35 ಯುದ್ಧ ವಿಮಾನದೊಂದಿದೆ ತೈವಾನ್ ವಾಯು ಪ್ರದೇಶಕ್ಕೆ ಚೀನಾ ವಾಯುಸೇನೆ ಅಕ್ರಮವಾಗಿ ಪ್ರವೇಶಿಸಿದ್ದು, ತೈವಾನ್‌ನ ಕರಾವಳಿ ಪ್ರದೇಶ ಗುವಾಂಗ್ಸಿ ಎಂಬಲ್ಲಿ ಯುದ್ಧ ವಿಮಾನ ಪತನವಾದ ಬಗ್ಗೆ ವರದಿಯಾಗಿದೆ.

ಇದನ್ನು ತೈವಾನ್ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದು, ವಿಮಾನ ಪತನವಾಗಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಭಾರತದೊಂದಿಗೆ ಕಾದಾಡಲು ಹವಣಿಸುತ್ತಿರುವ ಸಂದರ್ಭದಲ್ಲಿಯೇ ತೈವಾನ್ ಎಂಬ ಪುಟ್ಟ ದೇಶದಿಂದ ಚೀನಾಗೆ ಭಾರೀ ಮುಖಭಂಗವಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದೆ.

ಕೆಲವರು ವಿಮಾನ ಪತನವಾಗಿರಬಹುದು ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸುಖೋಯ್‌ನಂತಹ ಅತ್ಯಾಧುನಿಕ ವಿಮಾನ ಪತನವಾಗುವ ಸಾಧ್ಯತೆ ಕಡಿಮೆ,‌ ಅಲ್ಲದೆ ಯುದ್ಧ ವಿಮಾನದ ಅವಶೇಷಗಳು ಆ ಪ್ರದೇಶದ ತುಂಬಾ ಹರಡಿಕೊಂಡಿದ್ದು ಇದು ಅಪಘಾತವಲ್ಲ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಇಲ್ಲಿವರೆಗೆ ಈ ಘಟನೆಯ ಬಗ್ಗೆ ಚೀನಾ ಆಗಲಿ, ತೈವಾನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ತೈವಾನ್‌ ಚೀನಾದ ಯುದ್ಧ ವಿಮಾನವನ್ನ ಹೊಡೆದುರುಳಿಸಿರುವುದೇ ನಿಜವಾಗಿದ್ದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ದಟ್ಟವಾಗಿದೆ. ಪತನವಾದ ವಿಮಾನದ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!