fbpx

ಕಾರುಗಳಲ್ಲೇ ಮೂಡಿದ ಗಣಪ, ವಿಶಿಷ್ಟ ರೀತಿಯಲ್ಲಿ ‘ಗಣೇಶ ಚತುರ್ಥಿ’ ಆಚರಿಸಿದ ‘ಜೀಪ್’ ಕಂಪನಿ! ವೈರಲ್ ವಿಡಿಯೋ ನೋಡಿ

ಕರೋನಾ ಸಂಕಷ್ಟದಿಂದಾಗಿ ಈ ಬಾರಿ ದೇಶದಾದ್ಯಂತ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು, ಆದರೆ ಈ ವರ್ಷ ಕರೋನಾದಿಂದ ಇಡೀ ರಾಜ್ಯ ತತ್ತರಿಸಿ ಹೋಗಿದ್ದು ಸಾರ್ವಜನಿಕ ಗಣೇಶೋತ್ಸವವನ್ನು ನಿಶೇಧಿಸಲಾಗಿತ್ತು.

ಆದರೆ ಮಹಾರಾಷ್ಟ್ರದಲ್ಲಿ ಕಾರು ತಯಾರಿಕಾ ಘಟಕ ಹೊಂದಿರುವ ‘ಜೀಪ್’ ಕಂಪನಿ ಈ ಬಾರಿ ವಿಶೇಷವಾಗಿ ಗಣೇಶೋತ್ಸವ ಆಚರಿಸುವ ಮೂಲಕ ಗಮನ ಸೆಳೆದಿದೆ. 122 Compass SUV ಕಾರುಗಳನ್ನು ಬಳಸಿ 30ಸಾವಿರ ಚದರಿ ಅಡಿ ಜಾಗದಲ್ಲಿ ಗಣೇಶನನ್ನು ಸೃಷ್ಟಿಸಿ ಪೂಜೆ ಮಾಡಿ ಸಂಭ್ರಮಿಸಿದೆ.

img 20200904 wa00028859380258772009149

ಕಾರುಗಳನ್ನು ಬಳಸಿ ಬೃಹತ್ ಗಣಪನನ್ನು ಮೂಡಿಸಲು ಹತ್ತಕ್ಕೂ ಹೆಚ್ಚು ಸಿಬ್ಬಂದಿ 50ಕ್ಕೂ ಹೆಚ್ಚು ಗಂಟೆಗಳನ್ನು ವ್ಯಯಿಸಿದ್ದಾರೆ. ಕೆಂಪು, ಬಿಳಿ ಹಾಗೂ ಬೂದು ಬಣ್ಣದ ಕಂಪಾಸ್ ಎಸ್‌ಯು‌ವಿ ಕಾರುಗಳನ್ನು ಬಳಸಿ ಗಣೇಶನನ್ನು ಸೃಪ್ಟಿಸಲಾಗಿದೆ.

ಇದನ್ನೂ ಓದಿ:  ಬೈಕ್ ಸವಾರನ ಸಣ್ಣ ತಪ್ಪಿಗೆ ಪ್ರಾಣವೇ ಹೋಗುತ್ತಿತ್ತು! ವೈರಲ್ ವಿಡಿಯೋ ನೋಡಿ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ‘ಜೀಪ್’ ಕಂಪನಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

video

Trending Short Videos

error: Content is protected !!