fbpx

ನೋಡನೋಡುತ್ತಿದ್ದಂತೆ ರಸ್ತೆಯಲ್ಲೇ ಮಗುವಿಗೆ ಜನ್ಮನೀಡಿದ ಯುವತಿ, ವೈರಲ್‌ ವಿಡಿಯೋ ನೋಡಿ

ರಸ್ತೆಯಲ್ಲಿ ನಿಂತುಕೊಂಡೇ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿಯ ಜೊತೆ ಹೆರಿಗೆ ಆಸ್ಪತ್ರೆಗೆ ಆಗಮಿಸುತ್ತಿದ್ದ ಯುವತಿಗೆ, ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ.

ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ನಡೆಯಲಾಗದೆ ಯುವತಿ ಅಲ್ಲೇ ನಿಂತುಕೊಂಡು ಬಿಟ್ಟಿದ್ದಾಳೆ. ತಕ್ಷಣ ಹೊರಗೋಡಿ ಬಂದ ಆಸ್ಪತ್ರೆಯ ಪ್ರಸೂತಿ ತಜ್ಞೆ ಯುವತಿಗೆ ರಸ್ತೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.


Continue Reading

img 20200904 wa00007987217121883916468

ಯುವತಿ ಸುಸಾನ್ ಆಂಡರ್ಸನ್ ತನ್ನ ಪತಿ ಜೋಸೆಫ್ ಜೊತೆ ಸಹಜ ಹೆರಿಗೆಗಾಗಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಆದರೆ ಆಸ್ಪತ್ರೆಯ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಇಳಿಯುತ್ತಿದ್ದಂತೆ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹೆರಿಗೆ ತಜ್ಞೆ ಓಡಿ ಬಂದು ಯುವತಿಗೆ ನಿಂತಿದ್ದ ಜಾಗದಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.

ಇದನ್ನೂ ಓದಿ:  ಕುಡುಕ ಕಾರು ಚಾಲಕನ ಆವಾಂತರಕ್ಕೆ ಅಮಾಯಕ ಬಲಿ, ಭೀಕರ ಅಪಘಾತದ ವಿಡಿಯೋ ವೈರಲ್

ಯುವತಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಘಟನೆಯ ಎಲ್ಲಾ ದೃಶ್ಯಗಳು ಅಲ್ಲೇ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ,

Watch Video

Trending Short Videos

close

This will close in 26 seconds

error: Content is protected !!