fbpx

Please assign a menu to the primary menu location under menu

ಕೇಬಲ್‌‌ನಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ತನ್ನ ಮಗುವನ್ನು ತಾಯಿ ಕೋತಿ ಯಾವ ರೀತಿ ರಕ್ಷಿಸಿತು ನೋಡಿ (ವೈರಲ್ ವಿಡಿಯೋ)

ತಾಯಿ-ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಮನುಷ್ಯರೇ ಇರಲಿ ಅಥವಾ ಪ್ರಾಣಿ-ಪಕ್ಷಿಗಳೇ ಇರಲಿ, ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ತಾಯಿ ತನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಕಾಪಾಡುತ್ತಾಳೆ.

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ತಾಯಿ ಕೋತಿಯೊಂದು ಕೇಬಲ್ ದಾಟಲಾಗದೆ ಒದ್ದಾಡುತ್ತಿದ್ದ ತನ್ನ ಮಗುವನ್ನು ಪ್ರಾಣಪಣಕ್ಕಿಟ್ಟು ಕಾಪಾಡಿದೆ. ಆಟವಾಡುತ್ತಿದ್ದ ಕೋತಿ ಮರಿ ಕಟ್ಟಡದ ಪಕ್ಕ ಹಾದುಹೋಗಿದ್ದ ಕೇಬಲ್‌ಗಳ ಮೇಲೆ ಹಾರಿದೆ. ಆದರೆ ಮರಳಿ ತಾಯಿಯ ಬಳಿ ಹೋಗಲಾಗದೆ ಒದ್ದಾಡಿದೆ.

ಅಲ್ಲೇ ಕಟ್ಟಡದ ಮೇಲೆ ಇದ್ದ ತಾಯಿಕೋತಿ ಎಷ್ಟೇ ಪ್ರಯತ್ನ ಪಟ್ಟರು ಮರಿಯನ್ನು ಅಲ್ಲಿಂದ ಮರಳಿ ಕಟ್ಟಡದ ಮೇಲೆ ತರಲು ಸಾಧ್ಯವಾಗೋದಿಲ್ಲ. ಕೊನೆಗೆ ಯಾವುದೇ ದಾರಿಯಿಲ್ಲದೆ ತಾನೇ ಕೇಬಲ್ ಮೇಲೆ ಹಾರಿ ಅಲ್ಲಿದ್ದ ತನ್ನ ಮರಿಯನ್ನು ರಕ್ಷಿಸಿದೆ.

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ. ‘ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಬರೆದು ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!