fbpx

ಸೈಕಲ್ ಸವಾರನ ಮೇಲೆ‌ ಏಕಾಏಕಿ ದಾಳಿ ಮಾಡಿದ‌ ಗಜರಾಜ, ಮುಂದೇನಾಯಿತು ನೋಡಿ! ವೈರಲ್ ವಿಡಿಯೋ

ರಸ್ತೆಯಲ್ಲಿ ಸಂಚರಿಸುತ್ತಿದ್ದ ಸೈಕಲ್ ಸವಾರನ ಮೇಲೆ ಆನೆಯೊಂದು ದಾಳಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈಕಲ್ ಸವಾರನ ಮೇಲೆ ಆನೆ ದಾಳಿ ಮಾಡಿ ಆತನನ್ನು ಕೆಳಕ್ಕೆ ಬೀಳಿಸಿ ಕಾಲಿನಿಂದ ತುಳಿಯಲು ಯತ್ನಿಸಿದೆ.

ಆನೆ ದಾಳಿ ಮಾಡಿ ಕೆಳಕ್ಕೆ ಬೀಳಿಸುತ್ತಿದ್ದಂತೆ ಸೈಕಲ್ ಸವಾರ ಸತ್ತಂತೆ ನಟಿಸಿದ್ದಾನೆ. ಆನೆ ಎಷ್ಟೇ ಎಬ್ಬಿಸಲು ಪ್ರಯತ್ನಿಸಿದ್ರೂ ಆತ ಅಂಗಾತ ಮಲಗಿದ್ದಾನೆ. ಆನೆ ಸೈಕಲನ್ನು ಎತ್ತಿ ಆತನ ಮೇಲೆ ಹಾಕಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಒಂದು ಸಂದರ್ಭದಲ್ಲಿ ಆನೆ ಕಾಲಿನಿಂದ ಆತನನ್ನು ತುಳಿಯಲು ಯತ್ನಿಸಿದ್ದು, ಅಲ್ಲೇ ಇದ್ದ ಜನರು ಆತನನ್ನು ಓಡುವಂತೆ ಹೇಳಿದ್ದಾರೆ. ಆದರೆ ಆತ ಧೈರ್ಯಗೆಡದೆ ಅಲ್ಲೇ ಮಲಗಿದ್ದಾನೆ. ಕೊನೆಗೆ ಹೇಗೋ ತೆವಳುತ್ತಾ ದೂರ ಸರಿದು ಪ್ರಾಣ ಉಳಿಸಿಕೊಂಡಿದ್ದಾನೆ

ಈ ಘಟನೆ ನೈಜಿರಿಯಾದಲ್ಲಿ ನಡೆದಿರೋದು ಎಂದು ತಿಳಿದುಬಂದಿದ್ದು, ಆನೆಯ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!