fbpx

Please assign a menu to the primary menu location under menu

ಪುಂಡರ ಕೃತ್ಯಕ್ಕೆ ಬೆಚ್ಚಿಬಿದ್ದ ಜನ, ವೈರಲ್ ವಿಡಿಯೋ ನೋಡಿ

ಪುಂಡರ ಕೃತ್ಯಕ್ಕೆ ಜನರು ಬೆಸ್ತುಬಿದ್ದ ಘಟನೆ ಮಲೇಶ್ಯಾದಲ್ಲಿ ನಡೆದಿದೆ. ಸಾರ್ವಜನಿಕರು ಓಡಾಡುವ ಜಾಗದಲ್ಲಿ ಥೇಟ್‌ ಹುಲಿಯಂತೆ ಕಾಣುತ್ತಿದ್ದ ಪ್ರಾಣಿ ಅಲೆದಾಡುತ್ತಿದ್ದ ಹಿನ್ನೆಲೆಯಲ್ಲಿ ಜನರು ಬೆಚ್ಚಿಬಿದ್ದು, ಹೌಹಾರಿ ಹೋಗಿದ್ದಾರೆ.

ನೋಡಿದ ತಕ್ಷಣ ಹುಲಿಯಂತೆ ಗೋಚರಿಸುತ್ತಿದ್ದ ಪ್ರಾಣಿಯನ್ನು ಸರಿಯಾಗಿ ಗಮನಿಸಿದಾಗ, ಯಾರೋ ಪುಂಡರು ನಾಯಿಗೆ ಹುಲಿಯಂತೆ ಬಣ್ಣ, ಕಪ್ಪು ಪಟ್ಟಿಗಳನ್ನು ಬಳಿದು ಬೀದಿಗೆ ಬಿಟ್ಟಿರೋದು ಗೊತ್ತಾಗಿದೆ. ಜನರನ್ನು ಹೆದರಿಸುವ ಉದ್ದೇಶದಿಂದ ಯಾರೋ ಈ ಕೃತ್ಯವನ್ನು ಎಸಗಿದ್ದರು.

ಪ್ರಾಣಿಗಳಿಗೆ ಈ ರೀತಿ ಬಣ್ಣ ಬಳಿಯೋದರಿಂದ ಚರ್ಮದ ಖಾಯಿಲೆಗಳಿಗೆ ತುತ್ತಾಗಿ ಸಾಯೋ ಸಂಭವವಿದೆ. ಸದ್ಯ ನಾಯಿಯ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ಮಲೇಶ್ಯಾ ಸರ್ಕಾರ ಹಾಗೂ ಪ್ರಾಣಿದಯಾ ಸಂಘಟನೆಗಳು ಈ ಕೃತ್ಯ ಎಸಗಿದ ಖದೀಮರನ್ನು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಲು ಮುಂದಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸರ್ಕಾರ, ಯಾರು ತಪ್ಪಿತಸ್ಥರ ಬಗ್ಗೆ ಮಾಹಿತಿ ನೀಡುತ್ತಾರೋ ಅವರಿಗೆ ಬಹುಮಾನ ನೀಡೋದಾಗಿ ಹೇಳಿದೆ.

ಈ ಹಿಂದೆ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿಯೂ ನಾಯಿಗೆ ಹುಲಿಯ ರೀತಿ ಬಣ್ಣ ಹಚ್ಚಿದ ವಿಡಿಯೋಗಳು ವೈರಲ್ ಆಗಿದ್ದವು. ಉಡುಪಿಯಲ್ಲಿ ಜನರನ್ನು ಹೆದರಿಸುವ ಉದ್ದೇಶದಿಂದ ಪುಂಡರು ನಾಯಿಗೆ ಬಣ್ಣ ಬಳಿದು ಬಿಟ್ಟಿದ್ದರು, ಆದರೆ ಶಿವಮೊಗ್ಗದಲ್ಲಿ ತೋಟಗಳಿಗೆ ಹಾನಿ ಮಾಡುವ ಮಂಗಗಳ ಕಾಟದಿಂದ ಪಾರಾಗಲು ರೈತರೋರ್ವರು ತಮ್ಮ ಸಾಕು ನಾಯಿಗೆ ಹುಲಿಯ ರೀತಿ ಬಣ್ಣ ಹಚ್ಚಿದ್ದರು, ಇದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಮಲೇಶ್ಯಾದಲ್ಲಿ ನಡೆದ ಘಟನೆಯ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!